ಬೀಜಿಂಗ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ಜೈಶೆ ಉಗ್ರ ಮಸೂದ್ ಅಜರ್ ನನ್ನು ಅಂತಾರಾಷ್ಟ್ರೀಯ ಉಗ್ರ ಎಂದು ಘೋಷಿಸುವ ಭಾರತದ ಪ್ರಸ್ತಾಪಕ್ಕೆ ತಡೆಯಾಗಿರುವ ಚೀನಾ ಇದೀಗ ಸರ್ಜಿಕಲ್ ಸ್ಟ್ರೈಕ್ ಬಳಿಕ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.
ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ವಾಯು ಸೇನೆ ನಿನ್ನೆ ಬೆಳಗಿನ ಜಾವ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಭಾರತೀಯ ವಾಯು ಸೇನೆಯ ದಾಳಿಯಿಂದ ಬೆಚ್ಚಿ ಬಿದ್ದ ಪಾಕ್ ಕೂಡಾ ಪ್ರತೀಕಾರ ನೀಡುವುದಾಗಿ ಹೇಳಿಕೊಂಡಿತ್ತು.
ಈ ಎಲ್ಲಾ ಬೆಳವಣಿಗೆಗಳ ನಂತರ ಚೀನಾ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದ್ದು, ‘ಭಾರತ ಮತ್ತು ಪಾಕಿಸ್ತಾನ ಏಷ್ಯಾದ ಪ್ರಮುಖ ದೇಶಗಳು. ಈ ಎರಡು ದೇಶಗಳು ಪರಸ್ಪರ ಶಾಂತಿ ಕಾಯ್ದುಕೊಳ್ಳುವುದು ಮುಖ್ಯ. ಭಾರತ ಹೀಗೇ ಉಗ್ರರ ವಿರುದ್ಧ ತನ್ನ ಹೋರಾಟ ಮುಂದುವರಿಸಲಿ’ ಎಂದು ಚೀನಾ ಹೇಳಿಕೊಂಡಿದೆ. ತೆರೆಮರೆಯಲ್ಲಿ ಪಾಕ್ ಉಗ್ರನನ್ನು ಬೆಂಬಲಿಸುತ್ತಾ ಈ ರೀತಿ ಹೊರ ಜಗತ್ತಿಗೆ ಮತ್ತೊಂದು ಹೇಳಿಕೆ ನೀಡುತ್ತಿರುವ ಚೀನಾ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.