ನ್ಯೂಯಾರ್ಕ್ : ಫೇಸ್ ಬುಕ್ ದತ್ತಾಂಶಗಳಿಗೆ ಕನ್ನ ಹಾಕಿದ ಆರೋಪದ ಮೇಲೆ ರಾಜಕೀಯ ವಿಶ್ಲೇಷಣೆ ಹಾಗೂ ಚುನಾವಣಾ ಪ್ರಚಾರ ಸೇವೆ ನೀಡುವ ಕೇಂಬ್ರಿಡ್ಜ್ ಅನಾಲಿಟಿಕ ಖಾಸಗಿ ಸಂಸ್ಥೆ ಇನ್ನು ಮುಂದೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿಪ್ರಕಟಿಸಿದೆ.
ಈ ಸಂಸ್ಥೆ ತಾನು ದಿವಾಳಿಯಾಗಿದ್ದು, ತನ್ನ ವ್ಯವಹಾರಗಳನ್ನೆಲ್ಲ ಸ್ಥಗಿತಗೊಳಿಸುವುದಾಗಿ ಹೇಳಿಕೊಂಡಿದೆ. ಅಮೇರಿಕದ ಅಧ್ಯಕ್ಷಿಯ ಚುನಾವಣೆ ಸದರ್ಭದಲ್ಲಿ ಟ್ರಂಪ್ ಪರವಾಗಿ ಕೇಂಬ್ರಿಡ್ಜ್ ಅನಾಲಿಟಿಕ ಸಂಸ್ಥೆ ಲಕ್ಷಾಂತರ ಫೇಸ್ಬುಕ್ ಖಾತೆದಾರರ ಮಾಹಿತಿ ಕದ್ದು ಅದನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳಲಾಗಿತ್ತು. ಹಾಗೇ 2014 ರ ಲೋಕಸಭಾ ಚುನಾವಣೆ ಸೇರಿದಂತೆ ಹಲವು ಚುನಾವಣೆಗಳಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ರಾಜಕೀಯ ಪಕ್ಷಗಳು ಕೇಂಬ್ರಿಜ್ ಅನಲಿಟಿಕಾ ನೆರವು ಕೋರಿದ್ದವು ಎಂಬ ಅಂಶ ಇತ್ತೀಚೆಗೆ ಬಯಲಿಗೆ ಬಂದಿತ್ತು. ಈ ಎಲ್ಲಾ ಕಾರಣದಿಂದಾಗಿ ಅದು ವ್ಯವಹಾರಗಳನ್ನೆಲ್ಲ ಸ್ಥಗಿತಗೊಳಿಸುವುದಾಗಿ ಹೇಳಿಕೊಂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ