Webdunia - Bharat's app for daily news and videos

Install App

ಮಹಿಳೆಯರಿಗೆ ಬಂಪರ್‌ ಆಫರ್‌!

Webdunia
ಶುಕ್ರವಾರ, 19 ಆಗಸ್ಟ್ 2022 (09:28 IST)
ಮಾಸ್ಕೋ : ಕೋವಿಡ್ -19 ಸಾಂಕ್ರಾಮಿಕ ಮತ್ತು ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಹೊರಹೊಮ್ಮಿದ ದೇಶದ ಜನಸಂಖ್ಯಾ ಬಿಕ್ಕಟ್ಟನ್ನು ಸರಿದೂಗಿಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೊಸ ಪ್ಲಾನ್ ಹುಡುಕಿಕೊಂಡಿದ್ದಾರೆ.

ಹೌದು. 10 ಅಥವಾ ಹೆಚ್ಚಿನ ಮಕ್ಕಳನ್ನು ಹೊಂದಲು ಮಹಿಳೆಯರಿಗೆ ಪುಟಿನ್ ಹಣವನ್ನು ನೀಡುತ್ತಿದ್ದಾರೆ. 10 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದರೆ ಅಂತಹ ಮಹಿಳೆಗೆ 13,500 ಡಾಲರ್ (12,92,861 ರೂ.) ನೀಡುವ ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದಾರೆ.

ಸಾಂಕ್ರಾಮಿಕ ರೋಗ ಹಾಗೂ ಯುದ್ಧದ ಪರಿಣಾಮ ರಷ್ಯಾದಲ್ಲಿ ಜನಸಂಖ್ಯೆ ಕ್ಷೀಣಿಸಿದೆ. ಈ ಹಿನ್ನೆಲೆಯಲ್ಲಿ ಪುಟಿನ್, ‘ಮದರ್ ಹೀರೋಯಿನ್’ ಎಂಬ ಯೋಜನೆಯಡಿ ಈ ಗಿಫ್ಟ್ ಮಹಿಳೆಯರಿಗೆ ನೀಡುವ ಕುರಿತು ಘೋಷಣೆ ಮಾಡಿದ್ದಾರೆ ಎಂದು ರಷ್ಯಾದ ರಾಜಕೀಯ ಮತ್ತು ಭದ್ರತಾ ತಜ್ಞ ಡಾ. ಜೆನ್ನಿ ಮಾಥರ್ಸ್ ತಿಳಿಸಿದ್ದಾರೆ. 

2022ರ ಮಾರ್ಚ್ ನಿಂದ ರಷ್ಯಾದಲ್ಲಿ ಪ್ರತಿ ದಿನ ಹಲವು ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಅಲ್ಲದೆ ಉಕ್ರೇನ್-ರಷ್ಯಾ ನಡುವಿನ ಯುದ್ಧದಿಂದ ಸುಮಾರು 50 ಸಾವಿರ ಸೈನಿಕರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಹೆಚ್ಚು ಸದಸ್ಯರನ್ನು ಒಳಗೊಂಡ ಕುಟುಂಬಗಳನ್ನು ಹೊಂದಿರುವರು ಹೆಚ್ಚು ದೇಶಭಕ್ತರಾಗುತ್ತಾರೆ ಎಂದು ಪುಟಿನ್ ಹೇಳುತ್ತಿದ್ದಾರೆ ಎಂದು ಡಾ ಮ್ಯಾಥರ್ಸ್ ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments