ನವದೆಹಲಿ: ಚೀನಾದಿಂದ ಕೊರೋನಾ ಹರಡಿದ ಬೆನ್ನಲ್ಲೇ ಜಗತ್ತೇ ಆ ದೇಶದ ವಿರುದ್ಧ ತಿರುಗಿಬಿದ್ದಿದೆ. ಬೇಕೆಂದೇ ಚೀನಾ ಜಗತ್ತಿಗೆ ಕೊರೋನಾ ಹರಡಿದೆ ಎಂಬುದು ಹಲವು ರಾಷ್ಟ್ರಗಳ ಆರೋಪ. ಆದರೆ ಇದನ್ನು ಚೀನಾ ನಿರಾಕರಿಸುತ್ತಿದೆ.
ಇದರ ಬೆನ್ನಲ್ಲೇ ಅಮೆರಿಕಾವಂತೂ ಚೀನಾ ವಸ್ತುಗಳನ್ನು, ಚೀನಿಯರನ್ನು ಸಂಪೂರ್ಣವಾಗಿ ತನ್ನ ರಾಷ್ಟ್ರದಿಂದ ದೂರ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದೆ. ಇದರ ಮಧ್ಯೆಯೇ ಭಾರತದಲ್ಲೂ ಚೀನಾ ವಸ್ತು ಬಹಿಷ್ಕರಿಸಿ ಅಭಿಯಾನ ಟ್ವಿಟರ್ ನಲ್ಲಿ ಟ್ರೆಂಡ್ ಆಗುತ್ತಿದೆ.
ಚೀನಾ ವಸ್ತುಗಳ ಪಟ್ಟಿ ಮಾಡಿರುವ ಟ್ವಿಟರಿಗರು ‘ಬಾಯ್ಕಾಟ್ ಚೀನಾ’ ಅಭಿಯಾನ ಆರಂಭಿಸಿದ್ದಾರೆ. ಚೀನಾ ವಸ್ತುಗಳನ್ನು ಬಳಸಿ ಅವರಿಗೆ ಲಾಭ ಮಾಡಿಕೊಟ್ಟರೆ ಅವರು ನಮ್ಮ ವಿರುದ್ಧವೇ ಪರೋಕ್ಷವಾಗಿ ಕತ್ತಿ ಮಸೆಯುತ್ತಿದ್ದಾರೆ ಎಂದು ಹಲವರು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.