Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತ-ಚೀನಾ ಬಿಕ್ಕಟ್ಟು: ಅಮೆರಿಕಾ ಮಧ್ಯಪ್ರವೇಶಕ್ಕೆ ಭಾರತ ನಕಾರ

ಭಾರತ-ಚೀನಾ ಬಿಕ್ಕಟ್ಟು: ಅಮೆರಿಕಾ ಮಧ್ಯಪ್ರವೇಶಕ್ಕೆ ಭಾರತ ನಕಾರ
ನವದೆಹಲಿ , ಶುಕ್ರವಾರ, 29 ಮೇ 2020 (09:27 IST)
ನವದೆಹಲಿ: ಭಾರತ ಮತ್ತು ಚೀನಾ ನಡುವೆ ಲಡಾಕ್ ಗಡಿಯಲ್ಲಿ ಉದ್ಭವವಾಗಿರುವ ಗಡಿ ಸಮಸ್ಯೆ ನಿವಾರಣೆಗೆ ಮೂರನೆಯ ರಾಷ್ಟ್ರದ ಮಧ್ಯಸ್ಥಿಕೆ ಬೇಡ ಎಂದು ಭಾರತ ಸ್ಪಷ್ಟವಾಗಿ ಹೇಳಿದೆ.


ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ವಿದೇಶಾಂಗ ಇಲಾಖೆ ಸದ್ಯಕ್ಕೆ ನಮ್ಮ ಬಿಕ್ಕಟ್ಟು ಬಗೆಹರಿಸಲು ರಾಜತಾಂತ್ರಿಕ ಯೋಜನೆಗಳಿವೆ. ಇದಕ್ಕೆ ಮೂರನೆಯ ರಾಷ್ಟ್ರದ ಮಧ್ಯಸ್ಥಿಕೆ ಬೇಡ ಎಂದಿದೆ.

ಈ ನಡುವೆ ಮಾತುಕತೆ ಮಾತನಾಡಿದರೂ ಇನ್ನೊಂದೆಡೆ ಚೀನಾ ಗಡಿಯಲ್ಲಿ ಸೇನೆಯನ್ನು ಹಿಂಪಡೆದಿಲ್ಲ. ಈ ಹಿನ್ನಲೆಯಲ್ಲಿ ಭಾರತೀಯ ಸೇನೆಯೂ ಸನ್ನದ್ಧವಾಗಿ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಜಗತ್ತಿಗೆ ಚೀನಾ ನೀಡಿದ ಕೆಟ್ಟ ಉಡುಗೊರೆ- ಚೀನಾದ ವಿರುದ್ಧ ಟ್ರಂಪ್ ಆಕ್ರೋಶ