Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನೇಪಾಳದಲ್ಲಿರುವ ಭಾರತದ ರಾಯಭಾರಿ ಕಚೇರಿ ಸಮೀಪ ಬಾಂಬ್‌ ಸ್ಫೋಟ

ನೇಪಾಳದಲ್ಲಿರುವ ಭಾರತದ ರಾಯಭಾರಿ ಕಚೇರಿ ಸಮೀಪ ಬಾಂಬ್‌ ಸ್ಫೋಟ
ಕಠ್ಮಂಡು , ಮಂಗಳವಾರ, 17 ಏಪ್ರಿಲ್ 2018 (16:53 IST)
ಕಠ್ಮಂಡು : ನೇಪಾಳದ ಬಿರಾತ್‌ನಗರ ಪ್ರದೇಶ‌ದಲ್ಲಿರುವ ಭಾರತ ರಾಯಭಾರಿ ಕಚೇರಿ ಸಮೀಪ ಬಾಂಬ್‌ ಸ್ಫೋಟಗೊಂಡಿರುವುದಾಗಿ ಮಾಹಿತಿ ತಿಳಿದುಬಂದಿದೆ.

ಸೋಮವಾರ ರಾತ್ರಿ 8.20ರ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಈ ವೇಳೆ ಕಚೇರಿಯಲ್ಲಿ ಯಾರೂ ಇರಲಿಲ್ಲಎಂಬುದಾಗಿ ತಿಳಿದುಬಂದಿದೆ.

 

ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಮೋರಾಂಗ್‌ ಜಿಲ್ಲಾ ಎಸ್‌ಪಿ ಅರುಣ್‌ಕುಮಾರ್‌ ಬಿ.ಸಿ ಅವರು, 'ಕಚೇರಿಯ ಹಿಂದೆ ಇರುವ ಖಾಲಿ ಜಾಗದಲ್ಲಿ ಸೋಮವಾರ ರಾತ್ರಿ ಸ್ಫೋಟ ಸಂಭವಿಸಿದ್ದು, ಕಾಂಪೌಂಡ್‌ಗೆ ಸಣ್ಣ ಪ್ರಮಾಣದ ಹಾನಿಯಾಗಿದೆ' ಎಂದಿದ್ದಾರೆ. ಈ ಘಟನೆ ಬಳಿಕ ಪ್ರದೇಶದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

 

ಸೋಮವಾರ ಸ್ಥಳೀಯ ರಾಜಕೀಯ ಪಕ್ಷವೊಂದು ಬಿರಾತ್‌ನಗರ ಬಂದ್‌ ಗೆ ಕರೆ ನೀಡಿದ್ದರಿಂದ ಈ ಕೃತ್ಯಕ್ಕೆ ಸ್ಥಳೀಯ ರಾಜಕೀಯ ಗುಂಪು ಕಾರಣವಿರಬಹುದು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಪಕ್ಷದ ಪರ ಪ್ರಚಾರಕ್ಕೆ ನಿಂತ ನಟಿ ಅಮೂಲ್ಯ