ಶ್ರೀಲಂಕಾ ಸರ್ಕಾರವು ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಯೂಟ್ಯೂಬ್ ಸೇರಿದಂತೆ ಎಲ್ಲ ಸಾಮಾಜಿಕ ಮಾಧ್ಯಮ ಸೈಟ್ಗಳ ಮೇಲೆ ನಿರ್ಬಂಧ ಹೇರಿದೆ.
ಈ ಮೂಲಕ ತಪ್ಪು ಮಾಹಿತಿಯ ಹರಿದಾಡುವಿಕೆ ಹಾಗೂ ದೇಶದಲ್ಲಿ ಪ್ರತಿಭಟನೆಗಳನ್ನು ಸಂಘಟಿಸಲು ಜನರನ್ನು ಸಜ್ಜುಗೊಳಿಸುವುದನ್ನು ತಡೆಯುತ್ತಿದೆ.
ಸಾಮಾಜಿಕ ಜಾಲತಾಣಗಳ ಮೇಲೂ ನಿಷೇಧ ಹೇರಲಾಗಿದೆ. ಪ್ರತಿಭಟನೆಗಳನ್ನು ತಡೆಗಟ್ಟಲು ಮಿಲಿಟರಿ ಮಾದರಿಯ ಕಠಿಣ ಕ್ರಮಗಳನ್ನು ವಿಧಿಸಿ ಕರ್ಫ್ಯೂ ಜಾರಿಗೊಳಿಸಲಾಗಿರುವುದರಿಂದ,
ಅಗತ್ಯ ವಸ್ತುಗಳ ಸೇವೆಗೆ ಮಾತ್ರ ಹೊರಗೆ ಬರಬೇಕಿದೆ. ಶಂಕಿತರನ್ನು ವಿಚಾರಣೆಯಿಲ್ಲದೇ ಬಂಧಿಸುವಂತೆ ಸರ್ಕಾರ ಆದೇಶ ನೀಡಿದೆ.