ಬ್ರಸೆಲ್ಸ್ : ವಿಶ್ವದ ಅತಿ ದೊಡ್ಡ ಚಾಕೊಲೇಟ್ ಫ್ಯಾಕ್ಟರಿಯಲ್ಲಿ ಸಲ್ಮೊನೆಲ್ಲಾ ಬ್ಯಾಕ್ಟೀರಿಯಾ ಪತ್ತೆಯಾಗಿದೆ.
ಸದ್ಯ ಚಾಕೊಲೇಟ್ ಫ್ಯಾಕ್ಟರಿಯಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಬೆಲ್ಜಿಯಂನ ವೈಜ್ ನಗರದಲ್ಲಿರುವ ಸ್ವಿಸ್ ದೈತ್ಯ ಬ್ಯಾರಿ ಕ್ಯಾಲೆಬಾಟ್ ನಡೆಸುತ್ತಿರುವ ಚಾಕೊಲೇಟ್ ಫ್ಯಾಕ್ಟರಿ ವಿಶ್ವದಲ್ಲೇ ಅತ್ಯಂತ ದೊಡ್ಡ ಫ್ಯಾಕ್ಟರಿಯಾಗಿದೆ.
ಅದರಲ್ಲಿ ಸಲ್ಮೊನೆಲ್ಲಾ ಬ್ಯಾಕ್ಟೀರಿಯಾ ಪತ್ತೆಯಾಗಿರುವುದು ಚಾಕೊಲೇಟ್ ಪ್ರಿಯರಿಗೆ ಆಘಾತ ತಂದಿದೆ. ಸದ್ಯ ಕಾರ್ಖಾನೆಯಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಿಲಾಗಿದೆ ಎಂದು ಕಂಪನಿ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕಂಪನಿ ವಕ್ತಾರ ಕಾರ್ನೀಲ್ ವಾರ್ಲೋಪ್, ಪರೀಕ್ಷೆಯ ಬಳಿಕ ತಯಾರಿಸಲಾದ ಎಲ್ಲಾ ಉತ್ಪನ್ನಗಳನ್ನು ನಿರ್ಬಂಧಿಸಲಾಗಿದೆ. ಬ್ಯಾಕ್ಟೀರಿಯಾ ಕಂಡುಬಂದಂತೆ ಉತ್ಪನ್ನಗಳನ್ನು ಪಡೆದಿರುವ ಎಲ್ಲಾ ಗ್ರಾಹಕರನ್ನು ಸಂಪರ್ಕಿಸಲಾಗುತ್ತಿದೆ. ಮುಂದಿನ ಸೂಚನೆ ಬರುವವರೆಗೂ ಚಾಕೊಲೇಟ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.