ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಬ್ರ್ಯುನೋದಲ್ಲಿರುವ ಯೂಟ್ಯೂಬ್ ಕೇಂದ್ರ ಕಚೇರಿಯಲ್ಲಿ ಮಹಿಳಾ ಗನ್ ಮ್ಯಾನ್ ವೊಬ್ಬರು ನಾಲ್ವರನ್ನು ಗಾಯಗೊಳಿಸಿ, ನಂತರ ತಾವೇ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆಯೊಂದು ನಡೆದಿದೆ. ಮೃತ ಶೂಟರ್ ಅನ್ನು ನಸಿಮ್ ನಜಾಫಿ ಅಘದಮ್ ಎಂದು ಶಂಕಿಸಲಾಗಿದೆ.
ಆರೋಪಿ ಮಹಿಳೆ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ನಾಲ್ಕು ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ಯೂಟ್ಯೂಬ್ ಕಚೇರಿ ಬಳಿ ಓಡಾಡದಂತೆ ಜನರಿಗೆ ನಿರ್ಬಂಧ ಹೇರಲಾಗಿದೆ. ಶೂಟೌಟ್ ಗೆ ಕಾರಣ ಇನ್ನೂ ಪತ್ತೆಯಾಗಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ