ಇಸ್ರೇಲ್: ಉತ್ತರ ಇಸ್ರೇಲ್ ಪಟ್ಟಣವಾದ ಸಿಸೇರಿಯಾದಲ್ಲಿರುವ ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರ ಮನೆಯನ್ನು ಟಾರ್ಗೆಟ್ ಮಾಡಿ ಬಾಂಬ್ ದಾಳಿ ನಡೆಸಲಾಗಿದೆ.
ಸಿಕ್ಕಿರುವ ಮಾಹಿತಿ ಪ್ರಕಾರ ಪ್ರಧಾನಿ ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣ ಹಾನಿಯಾಗಿಲ್ಲ. ಎರಡು ಫ್ಲಾಶ್ ಬಾಂಬ್ಗಳಳ ಮೂಲಕ ದಾಳಿ ಮಾಡಿದ್ದು, ಇದು ಪ್ರಧಾನಿ ಮನೆಯ ಉದ್ಯಾನವನದ ಮೇಲೆ ಬಿದ್ದಿದೆ.
ಇಸ್ರೇಲಿ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಭಾನುವಾರ (ನವೆಂಬರ್ 17) ಮುಂಜಾನೆ X ನಲ್ಲಿನ ಪೋಸ್ಟ್ನಲ್ಲಿ ಘಟನೆಯು "ಎಲ್ಲಾ ಕೆಂಪು ಗೆರೆಗಳನ್ನು" ದಾಟಿದೆ ಎಂದು ಹೇಳಿದರು.
"ಇಸ್ರೇಲ್ ಪ್ರಧಾನಿ ಅವರನ್ನು ಹತ್ಯೆಗೆ ಯತ್ನಿಸಿರುವುದು ಇರಾನ್ ಮತ್ತು ಆದರ ಬೆಂಬಲಿಗ ಪಡೆ ಎಂದು ಶಂಕಿಸಿದ್ದಾರೆ.
ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಭದ್ರತೆ ಮತ್ತು ನ್ಯಾಯಾಂಗ ಸಂಸ್ಥೆಗಳಿಗೆ ಕರೆ ನೀಡಿದರು. ಇಸ್ರೇಲ್ನ ಅಧ್ಯಕ್ಷ ಐಸಾಕ್ ಹೆರ್ಜೋಗ್ ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ಘಟನೆಯನ್ನು ಖಂಡಿಸಿದ್ದಾರೆ ಮತ್ತು ತನಿಖೆ ನಡೆಯುತ್ತಿದೆ ಎಂದು ಹೇಳಿದರು.
"ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಿರುದ್ಧದ ಪ್ರಚೋದನೆಯು ಎಲ್ಲಾ ಗಡಿಗಳನ್ನು ದಾಟಿದೆ. ಇಂದು ರಾತ್ರಿ ಅವರ ಮನೆಗೆ ಫ್ಲ್ಯಾಷ್ ಬಾಂಬ್ ಎಸೆಯುವುದು ಮತ್ತೊಂದು ಕೆಂಪು ಗೆರೆಯನ್ನು ದಾಟುತ್ತಿದೆ" ಎಂದು ಭದ್ರತಾ ಸಚಿವ ಇಟಾಮರ್ ಬೆನ್-ಗ್ವಿರ್ ಕೂಡ ಎಕ್ಸ್ ನಲ್ಲಿ ಹೇಳಿದ್ದಾರೆ.