ಅಮೆರಿಕ : ವಿಶ್ವಪ್ರಸಿದ್ಧ ಉದ್ಯಮಿ, ಹೂಡಿಕೆದಾರ ಪ್ರಸ್ತುತ ಬರ್ಕ್ಶೈರ್ ಹ್ಯಾಥ್ವೇ ಅಧ್ಯಕ್ಷ ಮತ್ತು ಸಿಇಒ ಆಗಿರುವ ವಾರೆನ್ ಎಡ್ವರ್ಡ್ ಬಫೆಟ್ ಅವರು ಜಗತ್ತು ಮತ್ತೊಂದು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ.
ಸಿಎನ್ಬಿಸಿಗೆ ನೀಡಿರುವ ಸಂದರ್ಶನದಲ್ಲಿ ಜಗತ್ತಿನ ಮುಂದಿನ ಪರಿಸ್ತಿತಿ ಕೋವಿಡ್-19 ಗಿಂತ ಭೀಕರವಾಗಿರಲಿದೆ ಎಂದು ಹೇಳಿರುವ ಇವರು ನಾವು ಇನ್ನೂ ಮುಂದಿನ ಪರಿಸ್ಥಿತಿ ಎದುರಿಸಲು ಸಾಮೂಹಿಕವಾಗಿ ಸಿದ್ಧರಾಗಿಲ್ಲ ಎಂದೂ ಹೇಳಿದ್ದಾರೆ. ಸಂದರ್ಶನದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ನಮ್ಮ ಜಗತ್ತನ್ನು ಬಾಧಿಸಲಿದೆ. ಪರಮಾಣು, ರಾಸಾಯನಿಕ, ಜೈವಿಕ, ಸೈಬರ್ ಭೀಕರತೆ ನಮಗೆ ತಿಳಿದಿದೆ. ಇವುಗಳಲ್ಲಿ ಪ್ರತಿಯೊಂದರ ಭೀಕರತೆ ಸಾಧ್ಯತೆಯ ಬಗ್ಗೆ ಅರಿವಿದೆ. ಆದರೆ ಇದನ್ನು ಎದುರಿಸಲು ಸಮಾಜ ಸಿದ್ಧವಾಗಿದೆ ಎಂದು ನಮಗೆ ಅನಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.ಕೋವಿಡ್-19 ಜಗತ್ತಿನಾದ್ಯಂತ ಹಬ್ಬುತ್ತಿದ್ದಂತೆ ಇದನ್ನು ತಡೆಗಟ್ಟಲು ತೆಗೆದುಕೊಂಡ ಮಾರ್ಗವೆಂದರೆ ಲಾಕ್ಡೌನ್. ಆದರೆ ಇದನ್ನೆಲ್ಲಾ ಗಮನಿಸಿದರೆ ಜಗತ್ತು ಇನ್ನು ಮುಂದಿನ ದೊಡ್ಡ ಪ್ರಮಾಣದ ತೊಂದರೆಗಳನ್ನು ಎದುರಿಸಲು ಸಮರ್ಪಕವಾಗಿ ಸಿದ್ಧವಾಗಿಲ್ಲ ಎಂದೆನಿಸುತ್ತಿದೆ. ಉದ್ಯಮಿಗಳ ಪ್ರಕಾರ, ಮುಂದಿನ ಅನಾಹುತ ದೊಡ್ಡ ಹಾಗೂ ಸಣ್ಣ ಪ್ರಮಾಣದಲ್ಲಿ ಘಟಿಸಬಹುದು. ಆದರೆ ದೊಡ್ಡ ಪ್ರಮಾಣದ ಸನ್ನಿವೇಶಗಳಿಗೆ ಸಮಾಜ ತಯಾರಿ ನಡೆಸುವುದು ಕಷ್ಟಕರವಾಗಿದೆ ಎಂದು ಹೇಳಿದ್ದಾರೆ.