ಲಂಡನ್ : ಅಮೆರಿಕನ್ ನಟಿ, ಬ್ರಿಟನ್ನ ಯುವರಾಜ ಹ್ಯಾರಿಯವರ ಪತ್ನಿ ಮೇಘನ್ ಮರ್ಕೆಲ್ ರಾಜಮನೆತನದ ಸಂಪ್ರದಾಯವನ್ನು ಬ್ರೇಕ್ ಮಾಡಿ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.
ಲಂಡನ್ನ ರಾಯಲ್ ಅಕಾಡೆಮಿ ಆಫ್ ಆಟ್ಸ್ರ್ನಲ್ಲಿ ವಸ್ತು ಪ್ರದರ್ಶನ ಉದ್ಘಾಟನೆಗೆ ಮೇಘನ್ ಆಗಮಿಸಿದ್ದರು. ಇದೇ ಮೊದಲ ಬಾರಿ ಏಕಾಂಗಿಯಾಗಿ ಸಾರ್ವಜನಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮೇಘನ್ ಐಶಾರಾಮಿ ಕಾರಿನಿಂದ ಇಳಿಯುತ್ತಿದ್ದಂತೆ ಆಕೆಯನ್ನು ವ್ಯಕ್ತಿಯೊಬ್ಬರು ಹಸ್ತಲಾಘವ ನೀಡಿ ಸ್ವಾಗತಿಸಿದ್ದಾರೆ.
ಆ ಸಂದರ್ಭದಲ್ಲಿ ನಟಿ ಮೇಘನ್ ಮರ್ಕೆಲ್ ಅಭ್ಯಾಸ ಬಲದಂತೆ ಸ್ವತಃ ತನ್ನ ಕೈಯಿಂದಲೇ ಕಾರಿನ ಬಾಗಿಲು ತಳ್ಳಿ, ಬಾಗಿಲು ಮುಚ್ಚಿದರು. ಅವರು ಹೀಗೆ ಮಾಡಿರುವುದು ರಾಜಮನೆತನದ ಸಂಪ್ರದಾಯವನ್ನು ಮುರಿದಂತಾಗಿದ್ದು, ಈ ಕುರಿತ ವೀಡಿಯೊ ವೈರಲ್ ಆಗಿ, ಭಾರಿ ಪರ-ವಿರೋಧ ಚರ್ಚೆಗಳು ನಡೆದಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.