ಅಮೇರಿಕಾ : ಸಾಮಾನ್ಯವಾಗಿ ಮೀನುಗಳು ನೀರಿನಲ್ಲಿ ಮಾತ್ರ ಜೀವಂತವಾಗಿರುತ್ತವೆ. ಆದರೆ ಅಮೇರಿಕಾದಲ್ಲಿ ನೀರು ಹಾಗೂ ನೆಲ ಎರಡರ ಮೇಲೂ ಬದುಕುವ ವಿಶೇಷವಾದ ಮೀನೊಂದು ಪತ್ತೆಯಾಗಿದೆ.
ಹೌದು. ಅಮೇರಿಕಾದ ಜಾರ್ಜಿಯಾ ಗ್ವಿನೆಟ್ ಕೌಂಟಿ ಕೊಳದಲ್ಲಿ ನೀರು ಹಾಗೂ ನೆಲ ಎರಡರ ಮೇಲೂ ಬದುಕುವ ವಿಶೇಷವಾದ ಮೀನು ಕಂಡುಬಂದಿದೆ. ಹಾವಿನ ತಲೆಯಂತಹ ಮುಖವಿರುವ ಈ ಮೀನು 3 ಅಡಿ ಉದ್ದ ಹಾಗೂ 8 ಕೆಜಿ ಬೆಳೆಯಬಲ್ಲದಂತೆ.
ಆದರೆ ಈ ಮೀನನ್ನು ಕೊಲ್ಲಲು ಅಮೇರಿಕಾ ನಿರ್ಧಾರ ಮಾಡಿದೆ. ಕಾರಣ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ ಈ ಮೀನು ನೀರಿನಲ್ಲಿರುವಾಗ ಇತರ ಜಲಚರಗಳನ್ನು ತಿಂದು ಬದುಕಿದರೆ, ಭೂಮಿಯ ಮೇಲೆ ಇಲಿಗಳನ್ನು ಹಿಡಿದು ತಿನ್ನತ್ತವೆಯಂತೆ. ಈ ಮೀನುಗಳ ಸಂಖ್ಯೆ ಹೆಚ್ಚಾದಷ್ಟು ಪರಿಸರ ವ್ಯವಸ್ಥೆ ಹಾಳಾಗುತ್ತದೆ ಎಂಬ ಕಾರಣಕ್ಕೆ ಅಮೇರಿಕಾ ಅವುಗಳ ಸಂತತಿಯನ್ನು ನಾಶ ಮಾಡಲು ಹೊರಟಿದೆ.