Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಮಿತ್​​ ಶಾರನ್ನು 'ಕೊಲೆ ಆರೋಪಿ' ಎಂದ ರಾಹುಲ್​​ ಗಾಂಧಿಗೆ ಜಾಮೀನು ನೀಡಿದ ಕೋರ್ಟ್

ಅಮಿತ್​​ ಶಾರನ್ನು 'ಕೊಲೆ ಆರೋಪಿ' ಎಂದ ರಾಹುಲ್​​ ಗಾಂಧಿಗೆ ಜಾಮೀನು ನೀಡಿದ ಕೋರ್ಟ್
ನವದೆಹಲಿ , ಶನಿವಾರ, 12 ಅಕ್ಟೋಬರ್ 2019 (08:14 IST)
ನವದೆಹಲಿ : ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಕೇಂದ್ರ ಗೃಹ ಸಚಿವ ಅಮಿತ್​​ ಶಾರನ್ನು 'ಕೊಲೆ ಆರೋಪಿ' ಎಂದ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್​​ ಗಾಂಧಿಗೆ ಕೋರ್ಟ್ ಜಾಮೀನು ನೀಡಿದೆ.




ಕಳೆದ ವರ್ಷದ ಏಪ್ರಿಲ್​​​ 23ರಂದು ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಜನರನ್ನುದ್ದೇಶಿಸಿ ಮಾತಾಡಿದ್ದ ರಾಹುಲ್ ಗಾಂಧಿ, ಅಮಿತ್​ ಶಾ ಕೊಲೆ ಪ್ರಕರಣವೊಂದರಲ್ಲಿ ಪ್ರಮುಖ ಆರೋಪಿ ಎಂದು ಟೀಕಿಸಿದ್ದರು. ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಾಗಿತ್ತು.


ಈ ಪ್ರಕರಣದ ವಿಚಾರಣೆ ನಡೆಸಿದ ಅಹ್ಮದಾಬಾದ್ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಲವೂ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಸಾವಿರ ರೂ. ಬಾಂಡ್​​ ಮೇಲೆ ರಾಹುಲ್​​ ಗಾಂಧಿಗೆ ಜಾಮೀನು ನೀಡಿದೆ. ಅಲ್ಲದೇ ಮುಂದಿನ ಡಿಸೆಂಬರ್​​ 7ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನೆರೆ ಹಾನಿಗೆ ರಾಷ್ಟ್ರೀಯ ವಿಪತ್ತು ನಿಧಿಗಿಂತ ಹೆಚ್ಚುವರಿ ಪರಿಹಾರ ಘೋಷಿಸಿದ ಸಿಎಂ ಬಿಎಸ್ ವೈ