ಮ್ಯಾಡ್ರಿಡ್ : ಕಾರು ಚಲಾಯಿಸುತ್ತಾ ಲೈಂಗಿಕ ಕ್ರಿಯೆ ನಡೆಸಿದ ದಂಪತಿಗಳಿಗೆ ಕೋರ್ಟ್ ಆರು ತಿಂಗಳಗಳ ಕಾಲ ಜೈಲು ಶಿಕ್ಷೆ ವಿಧಿಸಿದ ಘಟನೆ ಸೆಗೊವಿಯಾ ಪ್ರಾಂತ್ಯದಲ್ಲಿ ನಡೆದಿದೆ.
ಸೆಗೊವಿಯಾ ಪ್ರಾಂತ್ಯದ ವಿಲ್ಕಾಸ್ಟಿನ್ ಬಳಿ ಎಪಿ 6 ರಸ್ತೆಯ ಮಧ್ಯ ಕಾರು ಚಲಾಯಿಸುತ್ತಾ ದಂಪತಿಗಳು ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಸ್ಲೋ ಲೈನ್ ನಲ್ಲಿ ಕಾರು ವೇಗವಾಗಿ ಚಲಾಯಿಸುತ್ತಿರುವುದನ್ನು ಕಂಡ ಪ್ರಯಾಣಿಕರು ಕಾರನ್ನು ಹಿಂಬಾಲಿಸಿ ಬಂದಾಗ ಈ ದೃಶ್ಯ ಕಾಣಿಸಿದೆ. ತಕ್ಷಣ ಅವರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದು ಪೊಲೀಸರಿಗೆ ನೀಡಿದ್ದಾನೆ.
ಪೊಲೀಸರು ಈ ದಂಪತಿಗಳನ್ನು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್ ಇವರಿಗೆ ಆರು ತಿಂಗಳಗಳ ಕಾಲ ಜೈಲು ಶಿಕ್ಷೆ ಹಾಗೂ ಎರಡು ವರ್ಷಗಳ ಕಾಲ ವಾಹನ ಚಲಾಯಿಸದಂತೆ ನಿರ್ಬಂಧ ಹೇರಿದೆ.