ಇಟಾನಗರ : ಭಾರತ-ಚೀನಾ ಬೆನ್ನಲ್ಲೇ ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಚೀನಾ ಗಡಿರೇಖೆ ಬಳಿ ಉತ್ತಮ ಸಂಪರ್ಕಕ್ಕಾಗಿ 22 ಮೊಬೈಲ್ ಟವರ್ಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.
ಈ ಕುರಿತು ಮಾತನಾಡಿದ ತವಾಂಗ್ ಜಿಲ್ಲಾಧಿಕಾರಿ ಕೆಸಾಂಗ್ ಗ್ನುರುಪ್ ದಾಮೊ, `ಈಗಿರುವ ಟವರ್ಗಳು ನಿರೀಕ್ಷಿತ ಸೇವೆ ನೀಡುತ್ತಿಲ್ಲ. ರಕ್ಷಣಾ ಪಡೆ ಮಾತ್ರವಲ್ಲದೇ ನಾಗರಿಕರಿಗೂ ಇದರಿಂದ ತೊಂದರೆಯುಂಟಾಗುತ್ತಿದೆ.
ಹಾಗಾಗಿ ಗಡಿ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕವನ್ನು ಸುಧಾರಿಸಲು 22 ಟವರ್ಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಒಟ್ಟು 43 ಟವರ್ಗಳ ಸ್ಥಾಪನೆಗೆ ಬೇಡಿಕೆ ಸಲ್ಲಿಸಲಾಗಿತ್ತು. ಈ ಪೈಕಿ ಕೇಂದ್ರ ಸರ್ಕಾರ 22 ಟವರ್ ಸ್ಥಾಪಿಸಲು ಅನುಮತಿಸಿದೆ ಎಂದು ಮಾಹಿತಿ ನೀಡಿದ್ದಾರೆ.