ಕೌ ಬಾಯ್ಸ್, ಡಿಸ್ಕೋ ದಿವಾಸ್, ಥ್ರಿಲ್ಲರ್ ಎಲ್ಲವೂ ರೋಬೋಟ್`ಗಳು. ಹೌದು, ಚೀನಾದಲ್ಲಿ 1069 ರೋಬೋಟ್`ಗಳು ಒಟ್ಟಿಗೆ ಡ್ಯಾನ್ಸ್ ಮಾಡುವ ಮೂಲಕ ಹೊಸ ಗಿನ್ನಿಸ್ ದಾಖಲೆ ಬರೆದಿವೆ.
ಚೀನಾದ ಗುವಾಂಗ್ ಡು ಪ್ರದೇಶದ ಗುವಾಂಗ್ ಝೂ ಪ್ರದೇಶದಲ್ಲಿ ಡಬ್ಲ್ಯೂ ಎಲ್ ಇಂಟೆಲಿಜೆನ್ಸ್ ಟೆಕ್ನಾಲಜಿ ಏರ್ಪಡಿಸಿದ್ದ ಈ ಸಾಮೂಹಿಕ ನೃತ್ಯದಲ್ಲಿ ಗಮನ ಸೆಳೆದ ರೋಬೋಟ್`ಗಳು ಗಿನ್ನಿಸ್ ದಾಖಲೆ ಸೇರಿವೆ. ಆಗಸ್ಟ್ 17ರಂದು ನಡೆದ ಡ್ಯಾನ್ಸ್ ಪ್ರಯೋಗದಲ್ಲಿ ಕೆಲವು ರೊಬೋಟ್`ಗಳು ಮಗುಚಿ ಬಿದ್ದಿದ್ದವು. ಇದೀಗ, ಅವುಗಳ ಸ್ಥಾನಕ್ಕೆ ಬೆರೆ ರೋಬೋಟ್`ಗಳನ್ನ ಸೇರಿಸಿ ಡ್ಯಾನ್ಸ್ ಮಾಡಿಸಲಾಗಿದೆ.
ಗಿನ್ನೆಸ್ ದಾಖಲೆ ಸೇರಿದ ಈ ಡೊಬಿ ರೋಬೋಟ್`ಗಳಿಗೆ 17 ಚಲನಶೀಲ ಜಾಂಯಿಟ್ಸ್`ಗಳಿವೆ. ಡ್ಯಾನ್ಸ್ ಮಾತ್ರವಲ್ಲ, ಹಾಡು ಹೇಳುವ, ಫುಟ್ಬಾಲ್, ಮಾರ್ಷಲ್ ಆರ್ಟ್, ಹೀಗೆ ಹಲವು ರೀತಿಯ ಪ್ರೋಗ್ರಾಮಿಂಗ್ ಮಾಡಲಾಗಿದೆ. ಈ ಹಿಂದೆ ಇದ್ದ 1007 ಡ್ಯಾನ್ಸ್ ದಾಖಲೆಯನ್ನ ಈ ರೋಬೋಟ್`ಗಳು ಮುರಿದಿವೆ. ಯರಾದರೂ ದಾಖಲೆಯನ್ನ ಮುರಿಯುವ ಮನಸ್ಸು ಮಾಡಿದ್ದರೆ ನೆನಪಿಡಿ. ಈ 1069 ರೊಬೋಟ್`ಗಳ ಪೈಕಿ ಒಂದೊಂದರ ಬೆಲೆ 330 ಡಾಲರ್(21080 ರೂ. ಗಳಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ