Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೆಕ್ಸ್ ನಲ್ಲಿಸಂಪೂರ್ಣ ತೃಪ್ತಿ ಸಿಗದ ಹೆಣ್ಣು ಈ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ!

ಸೆಕ್ಸ್ ನಲ್ಲಿಸಂಪೂರ್ಣ ತೃಪ್ತಿ ಸಿಗದ ಹೆಣ್ಣು ಈ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ!
ಬೆಂಗಳೂರು , ಗುರುವಾರ, 5 ಏಪ್ರಿಲ್ 2018 (08:09 IST)
ಬೆಂಗಳೂರು : ಸೆಕ್ಸ್ ಎಂದರೆ ಕೇವಲ ಲೈಂಗಿಕ ಪರಾಕಾಷ್ಠೆ ಹೊಂದುವುದಷ್ಟೇ ಅಲ್ಲ. ಇದರಲ್ಲಿ ಸಂಪೂರ್ಣ ತೃಪ್ತಿ ಒದಗಿದಾಗ ದೇಹದ ಮೇಲೆ ಉಂಟಾಗುವ ಪರಿಣಾಮಕ್ಕೂ,  ಸಂಪೂರ್ಣ ತೃಪ್ತಿ ಸಿಗದೇ ಇದ್ದಾಗ ದೇಹದ ಮೇಲೆ ಉಂಟಾಗುವ ಪರಿಣಾಮಗಳಿಗೂ ವ್ಯತ್ಯಾಸ ಇದೆ. ಒಂದು ವೇಳೆ ಹೆಣ್ಣು ಒರ್ಗ್ಯಾಸಮ್ ಹೊಂದದೆ ಇದ್ದರೆ ಅವರ ದೇಹದ ಮೇಲೆ ಏನೆಲ್ಲಾ ಪರಿಣಾಮಗಳು ಉಂಟಾಗುತ್ತವೆ ಎಂಬುದಕ್ಕೆ, ಇಲ್ಲಿದೆ ನೋಡಿ ಉತ್ತರ


*ಹೆಂಗಸರಲ್ಲಿ ಲೈಂಗಿಕ ಪರಾಕಾಷ್ಠೆ ಹೊಂದದೆ ಇದ್ದರೇ, ಶ್ರೋಣಿ ಮತ್ತು ಪಕ್ಕೆಯಲ್ಲಿ ನೋವು, ಸಂಕಟ ಕಾಣಿಸಿಕೊಳ್ಳುತ್ತದೆ
*ನೀವು ಸೆಕ್ಸ್ ಅಲ್ಲಿ ಅನ್ಯೋನ್ಯತೆ ಅನುಭವಿಸದಿದ್ದರೆ ಅಥವಾ ತುಂಬಾ ವಿರಳವಾಗಿ ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳುತ್ತಿದ್ದರೆ, ನಿಮಗೆ ಡಿಪ್ರೆಶನ್ ಅನುಭವ ಆಗಬಹುದು. ಸೆಕ್ಸ್ ಮತ್ತು ಒರ್ಗ್ಯಾಸಮ್ (ಪರಾಕಾಷ್ಠೆ) ಮನಸ್ಸಿಗೆ ಮುದ ನೀಡುವ ಹಾರ್ಮೋನ್ ಸೆರೋಟೋನಿನ್ ಅನ್ನು ಬಿಡುಗಡೆ ಮಾಡುತ್ತವೆ. ಚರ್ಮ-ಚರ್ಮದ ಸ್ಪರ್ಶವಿಲ್ಲ ಎಂದರೆ, ಭಾವುಕ ಜೀವಿಗಳಾದ ಮಾನವರು ಖಿನ್ನತೆಗೆ ಒಳಗಾಗಬಹುದು.


*ಒಂದು ವೇಳೆ ನೀವು ಸೆಕ್ಸ್ ನಲ್ಲಿ ಸಂಪೂರ್ಣ ತೃಪ್ತಿ ಹೊಂದುತ್ತಿಲ್ಲ ಎಂದರೆ, ಅದು ನಿಮ್ಮ ಸೆಕ್ಸ್ ಮೇಲಿನ ಆಸಕ್ತಿಯ ಮೇಲೆ ಪ್ರಭಾವ ಬೀರಬಹುದು. ಇದು ಪದೇ ಪದೇ ಆಗುತ್ತಿದ್ದರೆ, ಕೆಲವೇ ವಾರಗಳಲ್ಲಿ ನಿಮಗೆ ಸೆಕ್ಸ್ ಮೇಲೆ ಆಸಕ್ತಿ ಕಡಿಮೆ ಆಗುತ್ತದೆ.
*ನೀವು ಪರಾಕಾಷ್ಠೆ ಹೊಂದುವಾಗ ನಿಮ್ಮ ದೇಹದಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ರೆಗ್ಯುಲರ್ ಆಗಿ ಲೈಂಗಿಕ ಪರಾಕಾಷ್ಠೆ ಹೊಂದುತ್ತಿಲ್ಲ ಎಂದರೆ, ಆ ಭಾಗದಲ್ಲಿ ಕಟ್ಟಿಕೊಳ್ಳಲು ಶುರುವಾಗುತ್ತದೆ, ಟೈಟ್ ಆಗಲು ಶುರುವಾಗುತ್ತದೆ, ಸೆಕ್ಸ್ ವೇಳೆ ನೋವು ಹೆಚ್ಚಾಗುತ್ತದೆ ಮತ್ತು ಬಹಳ ಡ್ರೈ ಆಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯಾವ ಪಾತ್ರೆಯಲ್ಲಿ ಆಹಾರ ಬೇಯಿಸಿ ತಿಂದರೆ ಉತ್ತಮ ಗೊತ್ತಾ…?