ಬೆಂಗಳೂರು: ಹೆರಿಗೆ ಎಂದರೆ ಹೆಣ್ಣಿಗೆ ಪುನರ್ಜನ್ಮವಿದ್ದಂತೆ. ಅದರ ನೋವಿನ ಮುಂದೆ ಬೇರಾವ ನೋವೂ ಲೆಕ್ಕವೇ ಅಲ್ಲ ಎನ್ನುತ್ತಾರೆ. ಆದರೆ ಇದರ ಬಗ್ಗೆ ಕೆಲವು ಹೆಣ್ಣು ಮಕ್ಕಳಿಗೆ ಅತಿಯಾದ ಭಯವಿರುತ್ತದೆ.
ಇದೇ ಭಯಕ್ಕೆ ತನಗೆ ಮಕ್ಕಳೇ ಬೇಡ ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಇದು ಅವರ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುವುದಿದೆ.
ಹೆಣ್ಣಿನ ಜನ್ಮ ಸಾರ್ಥಕವಾಗಬೇಕಾದರೆ ತಾಯ್ತನ ಮುಖ್ಯವಾದುದು. ಅದರ ಬಗ್ಗೆ ವಿನಾಕಾರಣ ಭಯಬೇಕಿಲ್ಲ. ಒಂದು ವೇಳೆ ಅದುವೇ ಮಾನಸಿಕವಾಗಿ ಕಾಡುತ್ತಿದ್ದರೆ ಸೂಕ್ತ ಸಮಾಲೋಚಕರೊಂದಿಗೆ ಮಾತನಾಡಿ ನಿಮ್ಮ ಅನುಮಾನಗಳನ್ನು ನಿವಾರಿಸಿಕೊಳ್ಳಬಹುದು. ಯಾಕೆಂದರೆ ತಾಯ್ತನ, ಮಗು ಎನ್ನುವುದು ಗಂಡ-ಹೆಂಡತಿ ಪರಸ್ಪರ ಚರ್ಚಿಸಿ ತೆಗೆದುಕೊಳ್ಳಬೇಕಾದ ನಿರ್ಧಾರ ಎನ್ನುವುದನ್ನು ಮರೆಯಬಾರದು.