Publish Date: Thu, 20 Jun 2019 (08:21 IST)
Updated Date: Thu, 20 Jun 2019 (08:23 IST)
ಲಂಡನ್: ಮಹಿಳೆಯರಿರಲಿ, ಪುರುಷರಿರಲಿ ಜನನಾಂಗದ ಶುಚಿತ್ವದ ಬಗ್ಗೆ ಹೆಚ್ಚು ಗಮನಕೊಡಬೇಕಾಗುತ್ತದೆ. ಇಲ್ಲದೇ ಹೋದಲ್ಲಿ ಗುಪ್ತಾಂಗ ರೋಗಗಳಿಗೆ ದಾರಿ ಮಾಡಿಕೊಟ್ಟಂತೆ.
ಕೆಲವರಿಗೆ ಜನನಾಂಗದ ಸುತ್ತ ಗುಳ್ಳೆಯಾಗುವುದು, ನವೆ, ಇಲ್ಲವೇ ಬಿಳಿ ಸ್ರಾವ ಹೋಗುವುದು ಇತ್ಯಾದಿ ಸಮಸ್ಯೆಗಳಿರುತ್ತವೆ. ಅಥವಾ ಜನನಾಂಗದ ಕೆಟ್ಟ ವಾಸನೆ ಅಸಹನೀಯವಾಗುತ್ತದೆ.
ಇದು ಜನನಾಂಗದ ಸೋಂಕಿನ ಲಕ್ಷಣಗಳು. ಹೀಗಿದ್ದಲ್ಲಿ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಮತ್ತು ಮುಂದೆ ಜನನಾಂಗದ ಶುಚಿತ್ವದ ಬಗ್ಗೆ ಹೆಚ್ಚು ಗಮನಕೊಡಬೇಕು.