ಬೆಂಗಳೂರು: ಒಂದು ಮಗುವಾಯಿತು ಎಂದರೆ ಗಂಡ-ಹೆಂಡಿರ ಜೀವನವೇ ಬದಲಾಗುತ್ತದೆ. ಅದು ಲೈಂಗಿಕ ಜೀವನದ ಮೇಲೂ ಸಾಕಷ್ಟು ಪರಿಣಾಮ ಬೀರುತ್ತದೆ. ಮಗುವಾದ ಬಳಿಕ ಸಾಮಾನ್ಯವಾಗಿ ದಂಪತಿಗಳು ಎದುರಿಸುವ ಲೈಂಗಿಕ ಸಮಸ್ಯೆಗಳು ಏನೇನು ನೋಡೋಣ.
ಮೂಡ್ ಇರಲ್ಲ
ಮಗುವಾದ ಬಳಿಕ ಲೈಂಗಿಕ ಕ್ರಿಯೆ ಮಾಡುವ ಮೂಡ್ ಇರಲ್ಲ. ರೊಮ್ಯಾನ್ಸ್ ಮಾತ್ರ ಸಾಕು ಎನಿಸಬಹುದು.
ದೈಹಿಕ ಸಮಸ್ಯೆ
ಮಗುವಾದ ಬಳಿಕ ಮೊದಲ ಬಾರಿಗೆ ಲೈಂಗಿಕ ಕ್ರಿಯೆ ಮಾಡುವಾಗ ಕೆಲವೊಮ್ಮೆ ಮಹಿಳೆಯರಿಗೆ ಯೋನಿಯಲ್ಲಿ ನೋವು ಕಾಣಿಸಿಕೊಳ್ಳಬಹುದು. ಇದು ಪದೇ ಪದೇ ಆಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.
ಆತಂಕ
ಹೆರಿಗೆಯ ನಂತರ ಮಹಿಳೆಯರಿಗೆ ತಮ್ಮ ಸಂಗಾತಿ ದೇಹದ ಕೆಲವು ಭಾಗಗಳನ್ನು ಮುಟ್ಟುವುದು ಇಷ್ಟವಾಗದೇ ಹೋಗಬಹುದು. ಇದರಿಂದ ಮೊದಲಿನ ಖುಷಿ ಲೈಂಗಿಕತೆಯಲ್ಲಿ ಸಿಗದು.
ನಿದ್ರೆ ಸಿಕ್ಕರೆ ಸಾಕು
ಮಗುವಿನ ಆರೈಕೆಯಲ್ಲಿ ಸಾಕಷ್ಟು ಸುಸ್ತಾಗಿರುತ್ತದೆ. ರಾತ್ರಿಯಾದರೆ ನಿದ್ರೆಗೆ ಸಮಯ ಸಿಕ್ಕರೆ ಸಾಕು ಎಂದು ಮಹಿಳೆಯರು ಬಯಸುತ್ತಾರೆ. ಹೀಗಾಗಿ ರತಿ ಸುಖಕ್ಕೆ ಮೂಡ್ ಇರದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.