Publish Date: Mon, 29 Jul 2019 (08:59 IST)
Updated Date: Mon, 29 Jul 2019 (09:03 IST)
ಬೆಂಗಳೂರು : ನನಗೆ ಮದುವೆಯಾಗಿ 2 ವರ್ಷಗಳಾಗಿವೆ. ಇತ್ತೀಚೆಗೆ ನನ್ನ ಹೆಂಡತಿ ತನ್ನ ಮಾಜಿ ಲವರ್ ಜೊತೆ ಸಂಬಂಧ ಹೊಂದಿದ್ದಾಳೆ ಎಂಬುದನ್ನು ನಾನು ಕಂಡುಕೊಂಡೆ. ಆದಕಾರಣ ಈಗ ಆಕೆ ತನ್ನ ಹೆತ್ತವರ ಮನೆಯಲ್ಲಿ ಇದ್ದಾಳೆ. ಆದರೆ ಈಗ ಆಕೆಯ ತಂದೆತಾಯಿ ಆಕೆಯ ಜೊತೆಗೆ ಜೀವನ ನಡೆಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ನನಗೆ ಆಕೆ ತನ್ನ ಗೆಳೆಯನೊಂದಿಗೆ ಸುರಕ್ಷಿತ ಲೈಂಗಿಕ ಸಂಬಂಧ ಹೊಂದಿದ್ದಾಳೆಯೇ ? ಎಂಬುದನ್ನು ತಿಳಿದುಕೊಳ್ಳಬೇಕು. ಡಿಎನ್ ಎ ಪರೀಕ್ಷೆಯಿಂದ ಇದನ್ನು ತಿಳಿಯಬಹುದೇ? ಆಕೆಗೆ ಯಾವುದೇ ಲೈಂಗಿಕತೆಗೆ ಸಂಬಂಧಪಟ್ಟ ಕಾಯಿಲೆ ಇಲ್ಲವೇ ಎಂಬುದನ್ನು ತಿಳಿಯುವುದು ಹೇಗೆ?
ಉತ್ತರ: ನಿಮ್ಮ ಸಂಬಂಧ ತುಂಬಾ ಜಟಿಲವಾಗಿದೆ ಎಂದು ತೋರುತ್ತದೆ. ನಿಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ವೈಯಕ್ತಿಕ ಚರ್ಚೆ ನಡೆಸುವುದು ಉತ್ತಮ. ಇದರಿಂದ ನಿಮಗೆ ಸಹಾಯವಾಗಬಹುದು. ಆದರೆ ಡಿಎನ್ ಎ ಪರೀಕ್ಷೆಯಿಂದ ನಿಮಗೆ ಯಾವುದೇ ಸಹಾಯವಾಗುವುದಿಲ್ಲ.