ಬೆಂಗಳೂರು: ಲೈಂಗಿಕ ಕ್ರಿಯೆ ಬಳಿಕ ಪುರುಷ ಮತ್ತು ಮಹಿಳೆಯರು ಒಂದು ರೀತಿಯ ಬೇಸರಕ್ಕೊಳಗಾಗುತ್ತಾರೆ ಎಂಬುದನ್ನು ಹಲವು ಅಧ್ಯಯನಗಳೇ ದೃಢಪಡಿಸಿವೆ. ಇದಕ್ಕೆ ಕಾರಣಗಳು ಏನಿರಬಹುದು ನೋಡೋಣ.
ತಪ್ಪು ಕಲ್ಪನೆಗಳು
ಲೈಂಗಿಕತೆ ಬಗ್ಗೆ ಬಾಲ್ಯದಿಂದಲೇ ಬಂದ ತಪ್ಪು ಕಲ್ಪನೆಗಳು, ಪಾಠಗಳು ಈ ರೀತಿಯ ಸಮಸ್ಯೆಗೆ ಕಾರಣವಾಬಹುದು. ಲೈಂಗಿಕ ಕ್ರಿಯೆ ಎನ್ನುವುದು ತಪ್ಪು ಎಂಬ ತಪ್ಪು ಕಲ್ಪನೆ ಕೆಲವರಲ್ಲಿ ಬೆಳೆದುಬಂದಿರುತ್ತದೆ. ಇಂತಹ ಆಲೋಚನೆಗಳು ಬೇಸರಕ್ಕೆ ಕಾರಣವಾಬಹುದು.
ಹಿಂದಿನ ಘಟನೆಗಳು
ಹಿಂದೆ ನಡೆದ ಲೈಂಗಿಕ ಕಿರುಕುಳ ಅಥವಾ ಇಷ್ಟವಿಲ್ಲದೇ ನಡೆದ ಕ್ರಿಯೆಗಳಿಂದ ನಿಮ್ಮ ಮನಸ್ಸಿನಲ್ಲಿ ಅದರ ಬಗ್ಗೆ ಒಂದು ರೀತಿಯ ಜುಗುಪ್ಸೆಯ ಭಾವವಿರಬಹುದು. ಇದರಿಂದಾಗಿಯೇ ಮಿಲನ ಕ್ರಿಯೆ ಬಳಿಕ ಬೇಸರವಾಗಬಹುದು.
ಸಂಗಾತಿ ಏನಂದುಕೊಳ‍್ಳುತ್ತಾರೋ ಎಂಬ ಭಾವ
ಮಿಲನ ಕ್ರಿಯೆ ಬಳಿಕ ಸಂಗಾತಿ ಏನಂದುಕೊಂಡರೋ, ಆತನಿಗೆ ನನ್ನಿಂದ ತೃಪ್ತಿ ಸಿಕ್ಕಿಲ್ಲವೇ ಎಂಬೆಲ್ಲಾ ಭಾವನೆಗಳಿಂದ ಒಂದು ರೀತಿಯ ಮ್ಲಾನತೆ ಆವರಿಸಬಹುದು.
ದೇಹ ಸೌಂದರ್ಯ
ಕೆಲವರಿಗೆ ತಮ್ಮ ದೇಹ ಸೌಂದರ್ಯದ ಬಗ್ಗೆ ಕೀಳರಿಮೆಯಿರುತ್ತದೆ. ಇದರಿಂದಾಗಿಯೇ ಸಂಗಾತಿಗೆ ತನ್ನಿಂದ ತೃಪ್ತಿ ಸಿಗುತ್ತಿಲ್ಲ ಎಂಬ ತಪ್ಪು ಕಲ್ಪನೆ ಬೇಸರಕ್ಕೆ ಕಾರಣವಾಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.