Daily Horoscope
✕

ಪುರುಷರಲ್ಲಿ ಲೈಂಗಿಕಾಸಕ್ತಿ ಕಡಿಮೆಯಾಗಲು ಇವು ಕಾರಣಗಳಿರಬಹುದು

Webdunia
ಶುಕ್ರವಾರ, 1 ಡಿಸೆಂಬರ್ 2017 (08:49 IST)
ಬೆಂಗಳೂರು: ಪುರುಷರಲ್ಲಿ ಲೈಂಗಿಕ ನಿರಾಸಕ್ತಿಗೆ ಹಲವು ಕಾರಣಗಳಿರಬಹುದು. ಮೂಡ್ ಬದಲಾವಣೆ ಅಥವಾ ಇನ್ನು ಹಲವು ಕಾರಣಗಳಿಂದ ಪುರುಷರು ಸೆಕ್ಸ್ ನಿಂದ ವಿಮುಖರಾಗಬಹುದು. ಆ ಕಾರಣಗಳು ಯಾವುವು ನೋಡೋಣ.
 

ಒತ್ತಡ
ಮನಸ್ಸು ಒತ್ತಡದಲ್ಲಿದ್ದರೆ ಏನೂ ಬೇಡವೆನಿಸುವುದು ಸಹಜ. ಒತ್ತಡ ಮಾನಸಿಕ ಮಾತ್ರವಲ್ಲ, ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೆಚ್ಚು ಒತ್ತಡಕ್ಕೊಳಗಾಗಿದ್ದರೆ, ಮನಸ್ಸು ಖಿನ್ನವಾಗುತ್ತದೆ, ಸೆಕ್ಸ್ ಬೇಡವೆನಿಸುತ್ತದೆ.

ಆತ್ಮವಿಶ್ವಾಸದ ಕೊರತೆ
ಆತ್ಮ ವಿಶ್ವಾಸ ಕುಂದಿದೆ ಎಂದಾದರೆ ನಮ್ಮಲ್ಲೇ ಒಂದು ಕೀಳರಿಮೆ ಹುಟ್ಟಿಕೊಳ್ಳುತ್ತದೆ. ಇದೇ ಕೀಳರಿಮೆ ನಮ್ಮ ದೈಹಿಕ ಸಾಮರ್ಥ್ಯದ ಬಗ್ಗೆ ನಮಗೇ ಸಂಶಯ ಉಂಟು ಮಾಡುವಂತೆ ಮಾಡುತ್ತದೆ.

ಮದ್ಯಪಾನ
ಮದ್ಯಪಾನ ಎನ್ನುವುದು ತಾತ್ಕಾಲಿಕವಾಗಿ ದುಃಖ ಮರೆಯುವ ಸಾಧನ ಎನ್ನುತ್ತಾರೆ. ಆದರೆ ಇದು ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ಬದಲಿಗೆ ಸಮಸ್ಯೆಗೆ ಮೂಲ. ಇದು ಲೈಂಗಿಕ ಆಸಕ್ತಿಗೆ ಅಡ್ಡಿಯಾಗುತ್ತದೆ.

ನಿದ್ರಾಹೀನತೆ
ಲೈಂಗಿಕ ಜೀವನ ಸುಗಮವಾಗಿರಲು ಮನಸ್ಸು, ದೇಹ ರಿಲ್ಯಾಕ್ಸ್ ಆಗಿರಬೇಕು. ಆದರೆ ನಿದ್ರೆಯಿಲ್ಲದೇ ದೇಹ ಮತ್ತು ಮನಸ್ಸು ಸುಸ್ತಾಗಿರುವಾಗ ಲೈಂಗಿಕತೆ ಬಗ್ಗೆ ಆಸಕ್ತಿ ಹೇಗೆ ಬರಬೇಕು?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳು ದಿನಕ್ಕೆ ಎಷ್ಟು ಗಂಟೆ ಮೊಬೈಲ್ ನೋಡಬಹುದು, ತಪ್ಪದೇ ತಿಳಿದುಕೊಳ್ಳಿ

ಮುಟ್ಟಿನ ಮುನ್ನ ಅಥವಾ ನಂತರ ಮಹಿಳೆಯರಿಗೆ ತಲೆನೋವು ಬರುವುದೇಕೆ, ಪರಿಹಾರವೇನು

ಸದಾ ಹೊಟ್ಟೆ ಉಬ್ಬರವೇ, ಹಾಗಿದ್ದರೆ ಇದು ಕರುಳಿನ ಈ ಸಮಸ್ಯೆ ರಹಸ್ಯ ಸಂಕೇತಗಳು

ತಿನ್ನುವಾಗ ನಾಲಿಗೆ ಕಚ್ಚಿ ಗಾಯವಾದರೆ ತಕ್ಷಣ ಏನು ಮಾಡಬೇಕು

ದಿನಕ್ಕೆ ಎಷ್ಟು ಗಂಟೆ ಇಯರ್ಫೋನ್ ಬಳಸಬಹುದು, ಹೆಚ್ಚು ಬಳಸಿದರೆ ಏನಾಗುತ್ತದೆ ಗಮನಿಸಿ

ಮುಂದಿನ ಸುದ್ದಿ