ಬೆಂಗಳೂರು : ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಹೆಚ್ಚಿನ ಜೀವಿತಾವಧಿ ಏಕೆಂದರೆ ಅವರು ಪ್ರೌಢಾವಸ್ಥೆಗಿಂತ ಶೈಶವಾವಸ್ಥೆಯಲ್ಲಿ ಹೆಚ್ಚಾಗಿ ಬದುಕುಳಿಯುವ ಪ್ರಯೋಜನವನ್ನು ಹೊಂದಿರುತ್ತಾರೆ. ಇನ್ನು ಪ್ರತಿಕೂಲ ಕಾಲದಲ್ಲಿ ನವಜಾತ ಗಂಡು ಶಿಶುಗಳಿಗಿಂತ ಹೆಚ್ಚು ನವಜಾತ ಹೆಣ್ಣು ಶಿಶುಗಳು ಬದುಕುಳಿಯುವುದು ಸಾಧ್ಯತೆ ಹೆಚ್ಚಿದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.
ಮಹಿಳೆಯರು ಕ್ಷಾಮಗಳು ಮತ್ತು ಸಾಂಕ್ರಾಮಿಕ ರೋಗಗಳಂತಹ ಕೆಟ್ಟ ಸಂದರ್ಭಗಳಲ್ಲಿ ಸಹ ಬದುಕುಳಿಯುವ ಸಾಧ್ಯತೆ ಹೆಚ್ಚಿವೆಯಂತೆ. ಏಕೆಂದರೆ ಮಹಿಳೆಯರಲ್ಲಿ ವಿಶೇಷವಾಗಿ ಮದಜನಕ (ಈಸ್ಟ್ರೋಜೆನ್)ದಂತಹ ಜೆನೆಟಿಕ್ಸ್ ಅಥವಾ ಹಾರ್ಮೋನುಗಳನ್ನು ಹೊಂದಿದ್ದು ಈ ಕಾರಣದಿಂದಾಗಿ ಅವರಲ್ಲಿ ಜೈವಿಕ ಅಂಶಗಳನ್ನು ಹೆಚ್ಚಿವೆ. ಇವು ಮಹಿಳೆಯರ ದೇಹವು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಂತಹ ಪ್ರತಿರಕ್ಷಿತ ರಕ್ಷೆಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ