ಬೆಂಗಳೂರು: ಕನ್ನಡಿ ಮುಂದೆ ನಿಂತರೆ, ತಲೆಯಲ್ಲಿ ಅಲ್ಲಲ್ಲಿ ಕಾಣುವ ಬಿಳಿಗೂದಲಿನ ಚಿಂತೆಯೇ? ವಯಸ್ಸಾಗುವ ಮೊದಲೇ ಕೂದಲು ಹಣ್ಣಾಗುವುದಕ್ಕೆ ನಮ್ಮ ಅಂಗೈಯಲ್ಲೇ ಮದ್ದಿದೆ. ಅದೇನದು ನೋಡೋಣ.
ನೆಲ್ಲಿಕಾಯಿ ಮತ್ತು ನಿಂಬೆ ಹಣ್ಣು
ನೆಲ್ಲಿಕಾಯಿ ಮತ್ತು ನಿಂಬೆ ಹಣ್ಣು ನಮಗೆ ಸುಲಭದಲ್ಲಿ ಕೈಗೆಟುಕುವ ವಸ್ತುಗಳು. ಕೂದಲು ಬಿಳಿಯಾಗದಂತೆ ತಡೆಯಲು ಇವೆರಡಿದ್ದರೆ ಸಾಕು. ನೆಲ್ಲಿ ಕಾಯಿ ಮತ್ತು ನಿಂಬೆ ರಸವನ್ನು ಕೂದಲುಗಳಿಗೆ ನಿಯಮಿತವಾಗಿ ಹಚ್ಚುತ್ತಿದ್ದರೆ ಕೂದಲು ಬೇಗ ಬೆಳ್ಳಗಾಗುವುದಿಲ್ಲ.
ಈರುಳ್ಳಿ ಪೇಸ್ಟ್
ಕೂದಲಿನ ಆರೋಗ್ಯಕ್ಕೆ ಈರುಳ್ಳಿ ತುಂಬಾ ಉತ್ತಮ ಎನ್ನುವುದನ್ನು ಹಲವು ಕಡೆ ಓದಿರುತ್ತೇವೆ. ಈರುಳ್ಳಿಯನ್ನು ಪೇಸ್ಟ್ ಮಾಡಿಕೊಂಡು ಕೂದಲುಗಳಿಗೆ ಹಚ್ಚಿಕೊಂಡು ಅರ್ಧಗಂಟೆ ಬಿಟ್ಟು ತಲೆ ಸ್ನಾನ ಮಾಡಿ. ಹೀಗೇ ನಿಯಮಿತವಾಗಿ ಮಾಡುತ್ತಿದ್ದರೆ, ಕೂದಲು ಬೆಳ್ಳಗಾಗದು.
ಕ್ಯಾರೆಟ್ ಜ್ಯೂಸ್
ಕ್ಯಾರೆಟ್ ಜ್ಯೂಸ್ ಮಾಡಿ ಪ್ರತಿ ನಿತ್ಯ ಸೇವಿಸುತ್ತಿದ್ದರೆ, ಹಲವು ರೀತಿಯಲ್ಲಿ ಆರೋಗ್ಯಕ್ಕೆ ಒಳ್ಳೆಯದು. ಕ್ಯಾರೆಟ್ ಜ್ಯೂಸ್ ಹೊಟ್ಟೆ ಸೇರುತ್ತಿದ್ದರೆ, ಕೂದಲುಗಳೂ ಕಪ್ಪಾಗಿ, ದಟ್ಟವಾಗಿ ಬೆಳೆಯುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ