ಬೆಂಗಳೂರು: ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡರೆ ಹಲವು ಅಡ್ಡ ಪರಿಣಾಮಗಳಿವೆ ಎಂಬುದನ್ನು ಓದಿದ್ದೇವೆ. ಆದರೆ ಮಾತ್ರೆಗಳ ರಗಳೆಯೇ ಬೇಡ. ನಿಮ್ಮ ಅಡುಗೆ ಮನೆಯಲ್ಲೇ ನೋವು ನಿವಾರಕಗಳಿವೆ. ಅವು ಯಾವುವು ನೋಡೋಣ.
ಅರಸಿನ
ಅರಸಿನದಲ್ಲಿ ನಂಜು ನಿವಾರಕ ಗುಣವಿರುವುದರಿಂದ ಇದು ರೋಗ ನಿರೋಧಕವಾಗಿಯೂ ಕೆಲಸ ಮಾಡುತ್ತದೆ. ಕೀಲು ನೋವು, ಮಾಂಸ ಖಂಡಗಳ ನೋವು, ಊದಿಕೊಳ್ಳುವುದಕ್ಕೆ ಅರಸಿನ ಬಳಸಬಹುದು.
ಶುಂಠಿ
ಆರ್ಥರೈಟಿಸ್, ಹೊಟ್ಟೆ ನೋವು, ಎದೆ ನೋವು, ತಿಂಗಳ ಮುಟ್ಟಿನ ನೋವು ಮುಂತಾದವುಗಳಿಗೆ ಶುಂಠಿಯನ್ನು ಸೇವಿಸಿದರೂ ಸಾಕು.
ಕೆಂಪು ದ್ರಾಕ್ಷಿ
ಕೆಂಪು ದ್ರಾಕ್ಷಿ ಕೂಡಾ ನೋವು ನಿವಾರಕವಾಗಿ ಕೆಲಸ ಮಾಡಬಹುದು. ಕೆಂಪು ದ್ರಾಕ್ಷಿಯನ್ನು ಹೆಚ್ಚು ಸೇವಿಸುವುದರಿಂದ ಕೀಲು ನೋವು, ಬೆನ್ನು ನೋವಿನಂತಹ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಪೆಪ್ಪರ್ ಮಿಂಟ್
ಪೆಪ್ಪರ್ ಮಿಂಟ್ ಒಂದು ಕಾಲದಲ್ಲಿ ಫೇವರಿಟ್ ಚಾಕಲೇಟ್. ಇದು ಹಲ್ಲು ನೋವು, ತಲೆ ನೋವು, ನರ ಸಂಬಂಧಿ ನೋವುಗಳಿಗೆ ಉತ್ತಮ ಔಷಧಿ. ಅಲ್ಲದೆ ಅಜೀರ್ಣವಾದರೂ, ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ.
ಮಜ್ಜಿಗೆ
ಸೆಳೆತದ ನೋವು, ಊದಿಕೊಂಡಾತಾಗುವುದಕ್ಕೆ ಮಜ್ಜಿಗೆ ಉಪಕಾರಿ. ಮಜ್ಜಿಗೆಯಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾ ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಕೆಳ ಹೊಟ್ಟೆಯ ನೋವು ಪರಿಹರಿಸುವ ಗುಣ ಹೊಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ