ಬೆಂಗಳೂರು : ಹೆಚ್ಚಾಗಿ ಹೆಣ್ಣು ಮಕ್ಕಳಿಗೆ ತಮ್ಮ ಉಗುರುಗಳನ್ನು ಉದ್ದವಾಗಿ ಬೆಳೆಸಿ ಅದಕ್ಕೆ ನೈಲ್ ಪಾಲಿಶ್ ಹಚ್ಚಬೇಕು ಎಂಬ ಆಸೆ ಇರುತ್ತದೆ. ಆದರೆ ಕೆಲವರ ಉಗುರುಗಳು ಗಟ್ಟಿಯಾಗಿರುವುದಿಲ್ಲ. ಸ್ವಲ್ಪ ಉದ್ದ ಬಂದ ತಕ್ಷಣವೇ ಕಟ್ ಆಗುತ್ತದೆ. ಅಂತವರಿಗೆ ತಮ್ಮ ಉಗುರುಗಳನ್ನು ಗಟ್ಟಿಯಾಗಿಸಬೇಕೆಂದಿದ್ದರೆ ಈ ಟಿಪ್ಸ್ ಫಾಲೋ ಮಾಡಿ.
ಬೆಳ್ಳುಳ್ಳಿಯಲ್ಲಿ ಔಷಧಿ ಗುಣಗಳು ಇರುವುದರಿಂದ ಇದು ನಿಮ್ಮ ಉಗುರುಗಳನ್ನು ಸ್ಟ್ರಾಂಗ್ ಮಾಡುತ್ತೆ. ಉಗುರುಗಳು ತುಂಡಾಗುವ ಸಮಸ್ಯೆ ಕೂಡಾ ನಿಧಾನವಾಗಿ ಬಗೆಹರಿಯುತ್ತದೆ.
2-3 ಎಸಳು ಬೆಳ್ಳುಳ್ಳಿಯನ್ನ ಸಣ್ಣದಾಗಿ ಕತ್ತರಿಸಿಕೊಂಡು ಅದನ್ನು ಒಳ್ಳೆಯ ಕಂಪನಿಯ ನೇಲ್ ಪಾಲಿಶ್ಗೆ ಮಿಕ್ಸ್ಮಾಡಿ ಒಂದು ವಾರಗಳ ಕಾಲ ಹಾಗೆಯೇ ಇಡಿ. ನಂತರ ಆ ಪೇಸ್ಟನ್ನ ನಿಮ್ಮ ಉಗುರುಗಳಿಗೆ ಪ್ರತಿದಿನ ಹಚ್ಚಿಕೊಳ್ಳಿ. ಇದರಿಂದ ಉಗುರುಗಳು ಗಟ್ಟಿಯಾಗುತ್ತವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.