Publish Date: Thu, 03 Oct 2019 (08:51 IST)
Updated Date: Thu, 03 Oct 2019 (08:52 IST)
ಬೆಂಗಳೂರು: ಸೆಲೆಬ್ರಿಟಿಗಳಿರಲಿ, ಸಾಮಾನ್ಯರಿರಲಿ, ಮದುವೆಯಾದ ಮೇಲೆ ಎಲ್ಲರೂ ಕೇಳುವ ಒಂದೇ ಒಂದು ಪ್ರಶ್ನೆಯೆಂದರೆ ಗುಡ್ ನ್ಯೂಸ್ ಯಾವಾಗ ಅಂತ. ಇದನ್ನೇ ಕೇಳಿ ಕೇಳಿ ನೂತನ ದಂಪತಿಯಲ್ಲೂ ಯಾವಾಗ ಮಕ್ಕಳನ್ನು ಮಾಡಿಕೊಳ್ಳಬೇಕು ಎಂಬ ವಿಚಾರದಲ್ಲಿ ಕನ್ ಫ್ಯೂಷನ್ ಶುರುವಾಗುತ್ತದೆ.
ಮಹಿಳೆಯರಿಗೆ 32 ವರ್ಷ ಕಳೆದ ಮೇಲೆ ಫಲವಂತಿಕೆ ಕಡಿಮೆಯಾಗುತ್ತಾ ಹೋಗುತ್ತದೆ. ಹೀಗಾಗಿ ಇದಕ್ಕಿಂತ ಮೊದಲು ಗರ್ಭಿಣಿಯಾದರೆ ಆರೋಗ್ಯವಂತ ಮಕ್ಕಳನ್ನು ಪಡೆಯಬಹುದು. ಹಾಗಂತ ಸಲಹೆ ಕೊಡುವವರ ಮಾತಿಗೆ ಹೆಚ್ಚು ಕಿವಿಗೊಡಬೇಕಾಗಿಲ್ಲ. ನಿಮ್ಮ ಜೀವನ ನಿಮ್ಮದು. ಅದು ರೂಪಿಸುವುದು ನಿಮ್ಮ ಕೈಯಲ್ಲೇ ಇರುತ್ತದೆ.