ಬೆಂಗಳೂರು: ಒಂದು ವಯಸ್ಸು ದಾಟಿದ ಮೇಲೆ ಮಕ್ಕಳ ಎದುರು ಚೆಲ್ಲು ಚೆಲ್ಲಾಗಿ ಆಡಿದರೆ ಅದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರುವುದು ಸಹಜ. ಕೆಲವೊಮ್ಮೆ ಅನಿರೀಕ್ಷಿತವಾಗಿ ಸರಸವಾಡುವಾಗ ಮಕ್ಕಳ ಕಣ್ಣಿಗೆ ಬಿದ್ದರೆ ಏನು ಮಾಡೋದು ಎಂಬ ಆತಂಕ ಪೋಷಕರಿಗೆ ಆಗುತ್ತದೆ.
ಇದಕ್ಕೆ ಇರುವ ಪರಿಹಾರವೆಂದರೆ ಮಕ್ಕಳನ್ನು ದೊಡ್ಡವರಾದಂತೆ ಏಕಾಂಗಿಯಾಗಿ ಮಲಗಿ ನಿದ್ರಿಸಲು ಪ್ರೇರೇಪಿಸಬೇಕು. ಆದಷ್ಟು ಅವರ ಜತೆ ಮಲಗುವಾಗ ಲೈಂಗಿಕ ಸಮಾಗಮ ನಡೆಸಬಾರದು.
ನಿಮ್ಮ ಬಗ್ಗೆ ಮಕ್ಕಳಲ್ಲಿ ಗೌರವ ಭಾವನೆಯಿರುತ್ತದೆ. ನಿಮ್ಮನ್ನು ಅವರು ಆ ರೀತಿ ಯೋಚನೆ ಕೂಡಾ ಮಾಡರು. ಹೀಗಿರುವಾಗ ಅವರ ಮನಸ್ಸಲ್ಲಿ ಅಂತಹ ಭಾವನೆ ಮೂಡದಿರಲು ಚೆಲ್ಲು ಚೆಲ್ಲಾಗಿ ಆಡದೇ ಇದ್ದರೆ ಕ್ಷೇಮ.