ಬೆಂಗಳೂರು : ನಿಮ್ಮ ಎತ್ತರವನ್ನು ಹೆಚ್ಚಿಸಿಕೊಳ್ಳಲು ಹಲವಾರು ವಿಧಾನಗಳಿವೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಆಹಾರವು ಪ್ರಮುಖವಾದ ಮಹತ್ವವನ್ನು ಪಡೆಯುತ್ತದೆ. ಆಹಾರದಲ್ಲಿ ಲಭ್ಯವಾಗುವ ವಿಟಮಿನ್ಸ್ ಗಳು ಎತ್ತರವನ್ನು ಹೆಚ್ಚಿಸುವಲ್ಲಿ ಗಣನೀಯ ಸೇವೆ ನೀಡುತ್ತದೆ. ಆದ್ದರಿಂದ ಯಾವ ವಿಟಮಿನ್ ಗಳು ಎತ್ತರವನ್ನು ಹೆಚ್ಚಿಸುವುದಕ್ಕೆ ಸಹಕಾರ ನೀಡುತ್ತದೆ ಹಾಗೂ ಅವು ಯಾವ ಆಹಾರಪದಾರ್ಥಗಳಲ್ಲಿ ದೊರೆಯುತ್ತದೆ ಎಂದು ನೋಡೋಣ
1.ವಿಟಮಿನ್ ಬಿ1: ಕಡಲೆ ಬೀಜ, ಸೋಯಾ ಬಿನ್ಸ್, ಅಕ್ಕಿ, ಓಟ್ಸ್, ಹಂದಿಯ ಮಾಂಸ, ಕಾಳುಗಳು, ಬೀಜಗಳು, ಮೊಟ್ಟೆ ಇತ್ಯಾದಿ
2. ವಿಟಮಿನ್ ಬಿ2 : ಹಸಿರೆಲೆ ತರಕಾರಿಗಳು, ಮೊಟ್ಟೆ, ಮೀನು, ಹಾಲು ಇತ್ಯಾದಿ
3. ವಿಟಮಿನ್ ಡಿ: ಹಾಲು, ಟೋಮೆಟೋ, ಆಲೂಗಡ್ಡೆ, ಸಿಟ್ರಸ್ ಹಣ್ಣುಗಳು, ಹೂಕೋಸು, ಕೊಬ್ಬಿರುವ ಮೀನುಗಳು, ಚೀಸ್ ಇತ್ಯಾದಿಗಳಲ್ಲೂ ಇದು ಲಭ್ಯ
4. ವಿಟಮಿನ್ ಸಿ: ಸಿಟ್ರಸ್ ಹಣ್ಣುಗಳು, ಸೀಬೆಹಣ್ಣು, ಟೋಮೆಟೋ, ಬೆರ್ರೀ ಹಣ್ಣುಗಳು ಆಲೂಗಡ್ಡೆ ಇತ್ಯಾದಿ
5. ವಿಟಮಿನ್ ಎ: ಚೀಸ್, ಹಾಲು, ಮೊಟ್ಟೆಗಳು, ಕ್ಯಾರೆಟ್ ಇತ್ಯಾದಿಗಳು.
6. ಪಾಸ್ಪರಸ್: ಬೀಜಗಳು, ಬೀನ್ಸ್, ಫಿಶ್ ಇತ್ಯಾದಿಗಳಲ್ಲಿ ಅಗತ್ಯವಾಗುವಷ್ಟು ಪಾಸ್ಪರಸ್ ಅಂಶಗಳು ಇರುತ್ತದೆ.
7. ಕ್ಯಾಲ್ಸಿಯಂ: ಹಾಲು, ಡೈರಿ ಪದಾರ್ಥಗಳಾದ ಚೀಸ್, ಬೆಣ್ಣೆ, ಸ್ಪಿನಾಚ್, ಟರ್ನಿಪ್ ಗ್ರೀನ್ಸ್ ಇತ್ಯಾದಿಗಳಲ್ಲಿ ಲಭ್ಯ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ