ಬೆಂಗಳೂರು : ಹಣ್ಣುಗಳು ಹಾಗು ತರಕಾರಿಗಳನ್ನು ಬೆಳೆಸಲು ಅನೇಕ ರೀತಿಯಾದ ಕೆಮಿಕಲ್ಸ್ ಗಳನ್ನು ಬಳಸಿರುತ್ತಾರೆ. ಹಣ್ಣುಗಳು ಹಾಗು ತರಕಾರಿಗಳನ್ನು ಕ್ರಿಮಿಕೀಟಗಳಿಂದ ಹಾಳಾಗುವುದನ್ನು ತಪ್ಪಿಸಲು ಹಾಗು ಅವುಗಳು ಚೆನ್ನಾಗಿ ಬೆಳೆಯಲು ಈ ಕೆಮಿಕಲ್ಸ್ ಗಳನ್ನು ಬಳಸುತ್ತಾರೆ. ಅದನ್ನು ನಾವು ಮನೆಗೆ ತಂದು ಹಾಗೆ ನೀರಿನಲ್ಲಿ ತೊಳೆದರೆ ಅದು ಪೂರ್ತಿಯಾಗಿ ಸ್ವಚ್ಚವಾಗುವುದಿಲ್ಲ. ಅದು ಪೂರ್ತಿಯಾಗಿ ಹೋಗಬೇಕೆಂದರೆ ಈ ವಿಧಾನಗಳನ್ನು ಅನುಸರಿಸಿ.
ತರಕಾರಿ, ಹಣ್ಣುಗಳನ್ನು ಬಳಸುವ ಮೊದಲು ನೀರಿನಲ್ಲಿ ನೆನೆಸಿಟ್ಟು ಅದಕ್ಕೆ 2 ಹಿಡಿ ಕಲ್ಲುಪ್ಪು ಹಾಕಿ ½ ಗಂಟೆ ನೆನೆಸಿಟ್ಟರೆ ಅದರ ಮೇಲಿರುವ ಕೆಮಿಕಲ್ಸ್ ಎಲ್ಲಾ ಹೋಗಿ ಶುದ್ದವಾಗುತ್ತದೆ.
ಒಂದು ವೇಳೆ ½ ಗಂಟೆ ನೆನೆಸಿಡಲು ಸಮಯವಿಲ್ಲ ಬೇಗನೆ ಆಗಬೇಕು ಎನ್ನುವವರು ಮೊದಲು ತರಕಾರಿ ಅಥವಾ ಹಣ್ಣನ್ನು ಚೆನ್ನಾಗಿ ತೊಳೆದು ನಂತರ ಅವುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ನೀರು ಹಾಕಿ, ½ ನಿಂಬೆಹಣ್ಣಿನ ರಸ, 2-3 ಚಮಚ ವಿನೆಗರ್ ಹಾಕಿ ಚೆನ್ನಾಗಿ ತೊಳೆಯಿರಿ. ಇದರಿಂದ ಕೂಡ ಹಣ್ಣು, ತರಕಾರಿಗಳ ಮೇಲಿರುವ ಕೆಮಿಕಲ್ಸ್ ಹೋಗಿ ಶುದ್ದವಾಗುತ್ತವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ