ಬೆಂಗಳೂರು : ತ್ವಚೆ ಹೊಳೆಯುವಂತೆ ಮಾಡಲು ಕೆಲವರು ಕೆಮಿಕಲ್ ಯುಕ್ತ ಸೋಪ್ ಗಳನ್ನು ಬಳಸಿ ಮುಖದ ಅಂದವನ್ನು ಇನ್ನಷ್ಟು ಕೆಡಿಸಿಕೊಳ್ಳುತ್ತಾರೆ. ಆದ್ದರಿಂದ ಹೊಳೆಯುವ ತ್ವಚೆ ನಿಮ್ಮದಾಗಬೇಕೆಂದರೆ ಮನೆಯಲ್ಲಿಯೇ ತಯಾರಿಸಿದ ಈ ಬಾತ್ ಪೌಡರ್ ನ್ನು ಬಳಸಿ.
ಹುರಿದು ಪುಡಿ ಮಾಡಿದ ಉದ್ದಿನ ಬೇಳೆ ಪುಡಿ 50ಗ್ರಾಂ, ಹುರಿದು ಪುಡಿ ಮಾಡಿದ ಅಗಸೆ ಬೀಜದ ಪುಡಿ 50ಗ್ರಾಂ, ಹುರಿದು ಪುಡಿ ಮಾಡಿದ ಪಿಪ್ಪಲಿ ಪುಡಿ 50ಗ್ರಾಂ, ಗೋಧಿಹಿಟ್ಟು 50ಗ್ರಾಂ ಇವಿಷ್ಟನ್ನು ಮಿಕ್ಸ್ ಮಾಡಿ ಒಂದು ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಡಿ. ಸ್ನಾನ ಮಾಡುವ ½ ಗಂಟೆ ಮೊದಲು ಈ ಪೌಡರ್ ಗೆ ಹಸುವಿನ ತುಪ್ಪ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ದೇಹಕ್ಕೆ ಹಚ್ಚಿ. ಸ್ನಾನ ಮಾಡುವಾಗ ಕಡಲೆ ಹಿಟ್ಟನ್ನು ಬಳಸಿ. ಇದರಿಂದ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ.