Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಾಗಲು ಈ ಮನೆಮದ್ದನ್ನು ಬಳಸಿ

ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಾಗಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಸೋಮವಾರ, 28 ಅಕ್ಟೋಬರ್ 2019 (05:56 IST)
ಬೆಂಗಳೂರು : ಮಕ್ಕಳು ಬುದ್ದಿವಂತರಾಗಿರಬೇಕೆಂದು ಎಲ್ಲಾ ತಂದೆತಾಯಿ ಬಯಸುತ್ತಾರೆ. ಆದರೆ ಕೆಲವು ಮಕ್ಕಳಿಗೆ ಜ್ಞಾಪಕಶಕ್ತಿ ಕಡಿಮೆ ಇರುವುದರಿಂದ  ಎಷ್ಟೇ  ಓದಿದರೂ ನೆನಪು ಉಳಿಯುವುದಿಲ್ಲ. ಇಂತಹ ಮಕ್ಕಳ ಜ್ಞಾಪಕಶಕ್ತಿ ಹೆಚ್ಚಿಸಲು ಈ ಮನೆಮದ್ದು ಬಳಸಿ.



ಏಲಕ್ಕಿ ಪುಡಿ 4 ಗ್ರಾಂ, ಲವಂಗ ಪುಡಿ 8 ಗ್ರಾಂ , ಹಿಪ್ಪಲಿ ಚೂರ್ಣ 15 ಗ್ರಾಂ, ಜೀರಿಗೆ ಪುಡಿ 4 ಗ್ರಾಂ, ಕಲ್ಲುಸಕ್ಕರೆ ಪುಡಿ 75 ಗ್ರಾಂ, ಒಣಶುಂಠಿ ಪುಡಿ 8 ಗ್ರಾಂ, ಒಂದೆಲಗ ಸೊಪ್ಪಿನ ಪುಡಿ 75 ಗ್ರಾಂ, ಬಜೆ 15 ಗ್ರಾಂ, ಗೋರಾಖ್ ಮುಂಡಿ(ಶ್ರಾವಣಿ ಗಿಡ) 75 ಗ್ರಾಂ, ಜೇನುತುಪ್ಪ 150 ಗ್ರಾಂ ಇವಿಷ್ಟನ್ನು ತೆಗೆದುಕೊಂಡು ಒಂದು ಪಾತ್ರೆಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿದರೆ ಪೇಸ್ಟ್ ಸಿಗುತ್ತದೆ. ಇದನ್ನು ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಡಿ. ಆದರೆ ಇದನ್ನು ಫ್ರಿಜ್ ನಲ್ಲಿ ಇಡಬೇಡಿ. ಇದನ್ನು 5 ರಿಂದ 105 ವರ್ಷದವರೆಗಿನವರು ತಿನ್ನಬಹುದು.
 

5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ  ಬೆಳಿಗ್ಗೆ 5 ಗ್ರಾಂ, ಸಂಜೆ 5 ಗ್ರಾಂ ಊಟಕ್ಕೆ ಒಂದು ಗಂಟೆ ಮುಂಚೆ ತಿನ್ನಿಸಿ ಆಮೇಲೆ 1 ಗ್ಲಾಸ್ ನೀರು ಕುಡಿಸಿ. 15 ವರ್ಷ ಮೇಲ್ಪಟ್ಟವರಿಗೆ ಬೆಳಿಗ್ಗೆ10 ಗ್ರಾಂ, ಸಂಜೆ 10 ಗ್ರಾಂ ಊಟಕ್ಕೆ ಒಂದು ಗಂಟೆ ಮುಂಚೆ ತಿಂದು ಆಮೇಲೆ 1 ಗ್ಲಾಸ್ ನೀರು ಕುಡಿಯಿರಿ. ಇದನ್ನು 4-5 ತಿಂಗಳು ಮಾಡಿದರೆ ಬುದ್ಧಿ ಶಕ್ತಿ ತುಂಬಾ ಚುರುಕಾಗುತ್ತಾರೆ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಮುಖದ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗಲು ಇದನ್ನ ಹಚ್ಚಿ