Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೆವರು ಗುಳ್ಳೆಗಳಿಂದ ಮುಕ್ತಿ ಹೊಂದಲು ಈ ಮನೆಮದ್ದನ್ನು ಬಳಸಿ

ಬೆವರು ಗುಳ್ಳೆಗಳಿಂದ ಮುಕ್ತಿ ಹೊಂದಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಸೋಮವಾರ, 18 ಫೆಬ್ರವರಿ 2019 (07:08 IST)
ಬೆಂಗಳೂರು : ಬೇಸಿಗೆಗಾಲದಲ್ಲಿ ಹೆಚ್ಚಾಗಿ ಕೆಲವರ ದೇಹದಲ್ಲಿ ಬೆವರು ಗುಳ್ಳೆಗಳು ಮೂಡುತ್ತದೆ. ಇದರಿಂದ ದೇಹದಲ್ಲಿ ತುರಿಕೆ ಉಂಟಾಗುತ್ತದೆ. ಇಂತಹ ಗುಳ್ಳೆಗಳಿಂದ ಕಿರಿ ಕಿರಿ ಮತ್ತು ಮುಜುಗರವಾಗುತ್ತದೆ. ಹಾಗಾಗಿ ಈ ಬೆವರುಗುಳ್ಳೆಗಳ ಸಮಸ್ಯೆಯಿಂದ ಪಾರಾಗಲು ಈ ಮನೆಮದ್ದನ್ನು ಬಳಸಿ.


ತೆಂಗಿನ ಎಣ್ಣೆಯನ್ನು ಸೌತೆಕಾಯಿ ಜ್ಯೂಸ್‌ ಜತೆ ಕಲಸಿ ಬೆವರು ಗುಳ್ಳೆಗಳ ಮೇಲೆ ದಿನಕ್ಕೆ 2 ಬಾರಿ ಹಚ್ಚಿದರೆ ಗುಳ್ಳೆಗಳು ಮಾಯವಾಗುತ್ತವೆ. ಅರಿಶಿನ , ಮೆಂತ್ಯ, ದನಿಯಾ, ಹೆಸರುಕಾಳನ್ನು ಪುಡಿ ಮಾಡಿ ಸ್ನಾನ ಮಾಡುವಾಗ ಸೋಪಿನ ಬದಲಾಗಿ ಈ ಪುಡಿಯನ್ನು ಬಳಸಿದರೆ ಗುಳ್ಳೆಗಳು ನಿವಾರಣೆಯಾಗುತ್ತದೆ.


ಬೆವರು ಗುಳ್ಳೆ ಆಗಿ ತುಂಬಾ ನವೆ ಇದ್ದರೆ ಬೇವಿನ ಸೊಪ್ಪಿನ ಪೇಸ್ಟ್‌ಗೆ ರೋಸ್‌ ವಾಟರ್‌ ಬೆರೆಸಿ ಹಚ್ಚಿದರೆ ನವೆ ಕಡಿಮೆಯಾಗಿ ಗುಳ್ಳೆಗಳು ಶಮನವಾಗುತ್ತದೆ. ಹಸಿ ಆಲೂಗಡ್ಡೆಯನ್ನು ಕತ್ತರಿಸಿ ಬೆವರು ಗುಳ್ಳೆಗಳ ಮೇಲೆ 10 -15 ನಿಮಿಷಗಳು ಇಟ್ಟರೂ ಗುಳ್ಳೆಗಳು ಶಮನವಾಗುತ್ತದೆ. ಕರ್ಪೂರವನ್ನು ಬೇವಿನ ಎಣ್ಣೆ ಜತೆ ಪೇಸ್ಟ್‌ ಮಾಡಿ ಗುಳ್ಳೆಗಳ ಮೇಲೆ ಲೇಪನ ಮಾಡಿದರೆ ಗುಳ್ಳೆಗಳು ನಿವಾರಣೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೂಗಿನಲ್ಲಿ ಸುರಿಯುವ ರಕ್ತ ಕೂಡಲೆ ನಿಲ್ಲಬೇಕೆಂದರೆ ಹೀಗೆ ಮಾಡಿ