Webdunia - Bharat's app for daily news and videos

Install App

ಟೊಮೇಟೊ ಕೆಚಪ್ ಪ್ರಿಯರೇ ಹುಷಾರ್...!

Webdunia
ಗುರುವಾರ, 13 ಜನವರಿ 2022 (08:43 IST)
ಇವತ್ತಿನ ದಿನಗಳಲ್ಲಿ ಸಾಮಾನ್ಯವಾಗಿ ಸಕ್ಕರೆ ಇರುವ ಹಾಗೆಯೇ ಎಲ್ಲರ ಮನೆಯಲ್ಲೂ ಟೊಮೇಟೊ ಕೆಚಪ್ನ್ನು ಇಟ್ಟುಕೊಂಡಿರುತ್ತಾರೆ.
 
ಮನೆಯಿಂದ ಹೊರಗಡೆ ಫ್ರೆಂಚ್ ಫ್ರೈಸ್, ಬರ್ಗರ್, ಪಿಜ್ಜಾ, ಸ್ಯಾಂಡ್ ವಿಚ್ಗೆ ಕೆಚಪ್ ಹಾಕಿಕೊಂಡು ತಿನ್ನುವಂತೆಯೇ, ಮನೆಯಲ್ಲಿ ದೋಸೆ, ಇಡ್ಲಿಗೆ ಕೆಚಪ್ ಸೇರಿಸಿಕೊಂಡು ತಿನ್ತಾರೆ.

ಸಮೋಸಾ, ಪರೋಟ, ಮ್ಯಾಗಿ, ಫ್ರೆಂಚ್ ಫ್ರೈಸ್ ಸೇರಿಸಿ ಹಲವು ಸ್ನ್ಯಾಕ್ಸ್ನೊಂದಿಗೆ ಇದನ್ನು ಸೇರಿಸಿ ತಿನ್ನುವವರಿದ್ದಾರೆ. ಬೇರೆ ಹಲವು ರೀತಿಯ ಹಣ್ಣುಗಳಿಂದ ಕೆಚಪ್ ಅನ್ನು ತಯಾರಿಸುತ್ತಾರಾದರೂ ಟೊಮೇಟೊ ಕೆಚಪ್ ಹೆಚ್ಚು ಬಳಕೆಯಾಗುತ್ತದೆ.

ಟೊಮೇಟೊ, ಸಕ್ಕರೆ, ವಿನೆಗರ್ ಮತ್ತು ಇತರ ಮಸಾಲೆಗಳನ್ನು ಸೇರಿಸಿ ಟೊಮೇಟೊ ಕೆಚಪ್ ತಯಾರಿಸಲಾಗುತ್ತದೆ. ಸ್ಪಲ್ಪ ಸಿಹಿ, ಸ್ಪಲ್ಪ ಹುಳಿಯಾಗಿರುವ ಟೊಮೇಟೊ ಕೆಚಪ್ ಎಲ್ಲಾ ರೀತಿಯ ಆಹಾರದ ಜತೆಗೂ ಸುಲಭವಾಗಿ ಕಾಂಬಿನೇಶನ್ ಆಗುತ್ತದೆ.

ಸೇವನೆ ಅಪಾಯಕಾರಿ ?

ತಜ್ಞರ ಪ್ರಕಾರ, ಅಂಗಡಿಯಲ್ಲಿ ಖರೀದಿಸಿದ ಟೊಮೇಟೊ ಕೆಚಪ್ ಅನ್ನು ಹಲವಾರು ರಾಸಾಯನಿಕಗಳು ಮತ್ತು ಸಂರಕ್ಷಕಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಕೆಚಪ್ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ, ಉಪ್ಪು, ಫ್ರಕ್ಟೋಸ್, ಸಂರಕ್ಷಕಗಳು ಮತ್ತು ಕಾರ್ನ್ ಸಿರಪ್ನ್ನು ಹೊಂದಿರುತ್ತದೆ.

ಗ್ಯಾಸ್ಟ್ರಿಕ್

ಟೊಮೇಟೊಗಳು ಸಿಟ್ರಿಕ್ ಮತ್ತು ಮಾಲಿಕ್ ಆಮ್ಲದಲ್ಲಿ ಸಮೃದ್ಧವಾಗಿವೆ. ನೀವು ಅದನ್ನು ಹೆಚ್ಚು ಸೇವಿಸಿದಾಗ, ಅದು ಎದೆಯುರಿ ಅಥವಾ ಆಸಿಡ್ ರಿಫ್ಲಪ್ಸ್ಗೆ ಕಾರಣವಾಗಬಹುದು.

ಬೊಜ್ಜು

ಟೊಮೇಟೊ ಕೆಚಪ್ ಹೆಚ್ಚು ಸಕ್ಕರೆ ಮತ್ತು ಸಂರಕ್ಷಕಗಳನ್ನು ಹೊಂದಿರುತ್ತದೆ. ಇದು ದೇಹದಲ್ಲಿ ಕೊಬ್ಬನ್ನು ಮತ್ತು ಸ್ಥೂಲಕಾಯತೆಯನ್ನು ಹೆಚ್ಚಿಸುತ್ತದೆ. ಟೊಮೇಟೊ ಕೆಚಪ್ ಅನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿನ ಇನ್ಸುಲಿನ್ ಸಹ ಕಡಿಮೆಯಾಗುತ್ತದೆ. ಇದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಅಲರ್ಜಿಗಳು

ನೀವು ನಿಯಮಿತವಾಗಿ ಟೊಮೇಟೊ ಕೆಚಪ್ ಅನ್ನು ಸೇವಿಸಿದರೆ, ಅದು ಹಿಸ್ಟಮೈನ್ ಅನ್ನು ಒಳಗೊಂಡಿರುವುದರಿಂದ ದೇಹದಲ್ಲಿ ಹಲವಾರು ಅಲರ್ಜಿಗಳನ್ನು ಉಂಟುಮಾಡಬಹುದು. ಹೃದಯ
ನೀವು ನಿಯಮಿತವಾಗಿ ಟೊಮೇಟೊ ಕೆಚಪ್ ಅನ್ನು ಸೇವಿಸಿದಾಗ, ಅದು ದೇಹದಲ್ಲಿ ಫ್ರಕ್ಟೋಸ್ ಕಾರ್ನ್ ಸಿರಪ್ ಅನ್ನು ಸೇರಿಸುತ್ತದೆ. ಇದು ಹೃದಯ ಕಾಯಿಲೆಗಳ ಸಾಧ್ಯತಯನ್ನು ಹೆಚ್ಚಿಸುತ್ತದೆ.

ಉರಿಯೂತವ

ಕೆಚಪ್ ಹೆಚ್ಚು ಕಾಲ ಉಳಿಯಲು ಹಲವು ರಾಸಾಯನಿಕ ಅಂಶಗಳನ್ನು ಬಳಸಿಕೊಂಡು ಇದನ್ನು ತಯಾರಿಸಲಾಗುತ್ತದೆ. ಸಾಕಷ್ಟು ಸಂರಕ್ಷಕಗಳನ್ನು ಹೊಂದಿರುವ ಆಹಾರಗಳು ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತವೆ. 

ಮೂತ್ರಪಿಂಡ

ಕೆಚಪ್ನಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಅಂಶವಿರುತ್ತದೆ. ಹೆಚ್ಚಿನ ಸೋಡಿಯಂ ಮತ್ತು ಸಂಸ್ಕರಿಸಿದ ಆಹಾರಗಳನ್ನು ಸೇವಿಸುವುದು ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣವನ್ನು ಹೆಚ್ಚಿಸುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಮುಂದಿನ ಸುದ್ದಿ
Show comments