ಬೆಂಗಳೂರು : ಗುಲಾಬಿ ಗಿಡಗಳನ್ನು ಮನೆಯ ಬಳಿ ನೆಟ್ಟರೆ ಅದು ಮನೆಯ ಅಂದವನ್ನು ಹೆಚ್ಚಿಸುತ್ತದೆ. ಆದರೆ ಗುಲಾಬಿ ಗಿಡದಲ್ಲಿ ಹೂಗಳು ಹೆಚ್ಚಾಗಿ ಆಗಲು ಮತ್ತು ಗಿಡ ಹಾಳಾಗದಂತೆ ಚೆನ್ನಾಗಿ ಬೆಳೆಯಲು ಈ ನೀರನ್ನು ಪ್ರತಿದಿನ ಹಾಕಿ.
ನೀವು ಅಕ್ಕಿ, ಬೇಳೆ ತೊಳೆದ ನೀರನ್ನು ಗುಲಾಬಿ ಗಿಡಕ್ಕೆ ಹಾಕಿ. ತರಕಾರಿ ಬೇಯಿಸಿದ ನೀರನ್ನು ಕೂಡ ಗುಲಾಬಿ ಗಿಡಕ್ಕೆ ಹಾಕಿ. ಈ ನೀರಿನಲ್ಲಿ ಸಾಕಷ್ಟು ಪೋಷಕಾಂಶವಿದೆ, ಇದು ಗುಲಾಬಿ ಗಿಡಗಳು ಹಾಳಾಗದಂತೆ ತಡೆಯುತ್ತದೆ ಮತ್ತು ಮಣ್ಣು ತೇವಾಂಶದಿಂದ ಕೂಡಿದ್ದು ಗಿಡದಲ್ಲಿ ಚೆನ್ನಾಗಿ ಹೂ ಬೆಳೆಯಲು ಸಹಕರಿಸುತ್ತದೆ.