ಬೆಂಗಳೂರು: ವೀರ್ಯಾಣುಗಳ ಸಂಖ್ಯೆ ಕೊರತೆಯಿಂದಾಗಿ ಮಕ್ಕಳಾಗುವುದು ಕಷ್ಟವಾಗಿದ್ದರೆ, ಲೈಂಗಿಕ ಜೀವನದಲ್ಲಿ ಸಂತೃಪ್ತಿಯಿಲ್ಲದೇ ಹೋದರೆ ಪುರುಷರು ಈ ಸರಳ ಉಪಾಯಗಳನ್ನು ಮಾಡಿ ವೀರ್ಯಾಣು ಸಂಖ್ಯೆ ಹೆಚ್ಚಿಸಬಹುದು.
ಪ್ಲಾಸ್ಟಿಕ್ ನಿಂದ ದೂರವಿರಿ
ಪ್ಲಾಸ್ಟಿಕ್ ವಸ್ತುಗಳಲ್ಲಿ ಆಹಾರ ಸೇವನೆ, ಪಾನೀಯ ಸೇವನೆ ಮಾಡುವುದು ಉತ್ತಮವಲ್ಲ. ಪ್ಲಾಸ್ಟಿಕ್ ಅಂಶ ನಮ್ಮ ದೇಹ ಸೇರಿಕೊಂಡರೆ ವೀರ್ಯಾಣುಗಳ ಗುಣಮಟ್ಟ ಕಡಿಮೆಯಾಗಬಹುದು.
ಡಯಟ್
ಆಹಾರದಲ್ಲಿ ನಿಯಂತ್ರಣ ಸಾಧಿಸುವುದು ತುಂಬಾ ಮುಖ್ಯ. ಧೂಮಪಾನ, ಮದ್ಯಪಾನ ಸೇವನೆ ಒಳ್ಳೆಯದಲ್ಲ. ಆದಷ್ಟು ಹಣ್ಣು, ತರಕಾರಿ ಪೋಷಕಾಂಶಗಳಿರುವ ಆಹಾರ ವಸ್ತುಗಳನ್ನು ಸೇವಿಸಿ. ಹಾಗೆಯೇ ದೇಹಕ್ಕೆ ಚೆನ್ನಾಗಿ ವ್ಯಾಯಾಮ ಕೊಡಿ.
ಅತಿಯಾದ ಬಿಸಿ ಒಳ್ಳೆಯದಲ್ಲ!
ಅತಿಯಾದ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು, ಬಿಸಿಗೆ ಮೈ ಒಡ್ಡುವುದು ವೀರ್ಯಾಣುಗಳ ಸಂಖ್ಯೆಗೆ ಕುತ್ತು ತರುತ್ತದೆ.
ಟೈಟ್ ಒಳ ಉಡುಪು
ಒಳ ಉಡುಪು ಧರಿಸುವಾಗ ವಿಪರೀತ ಬಿಗಿ ಇರುವ ಒಳ ವಸ್ತ್ರಗಳನ್ನು ಧರಿಸದಿರಿ. ಹೆಚ್ಚು ಬಿಗಿ ಇರುವ ಒಳ ಉಡುಪುಗಳನ್ನು ಧರಿಸುವುದರಿಂದ ಪುರುಷರ ವೃಷಣಗಳು ಅತಿಯಾದ ಶಾಖಕ್ಕೊಳಗಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.