ಬಾದಾಮಿ ಪೇಸ್ ಪ್ಯಾಕ್: ಎರಡು ಚಮಚ ಬಾದಾಮಿ ಎಣ್ಣೆ ಮತ್ತು 2-3 ಹನಿ ಜೊಜೊಬಾ ಎಣ್ಣೆ ತೆಗೆದುಕೊಂಡು ಮಿಶ್ರಣ ಮಾಡಿ. ನಿಧಾನವಾಗಿ ತ್ವಚೆಗೆ ಮಸಾಜ್ ಮಾಡಿ. ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಇದು ರಕ್ತಸಂಚಾರ ಹೆಚ್ಚಿಸುವುದು. ಇದರಿಂದ ತ್ವಚೆಗೆ ಕಾಂತಿಯು ಸಿಗುವುದು. ಇದರಲ್ಲಿ ಇರುವ ವಿಟಮಿನ್ ಇ ತ್ವಚೆಗೆ ಒಳ್ಳೆಯ ಪೋಷಕಾಂಶ ನೀಡುವುದು.
ರಾತ್ರಿ ಮಲಗುವ ಮೊದಲು ಲಿಂಬೆ ಮತ್ತು ಹಾಲಿನ ಕ್ರೀಮ್ನ ಪ್ಯಾಕ್ ಅನ್ನು ಹಚ್ಚಿಕೊಂಡರೆ ಬೆಳಿಗ್ಗೆ ಎದ್ದಾಗ ನಿಮ್ಮ ಮುಖ ಕಾಂತಿಯುತವಾಗುತ್ತದೆ. ಒಂದು ಚಮಚ ಲಿಂಬೆ ರಸ ಮತ್ತು ¼ ಚಮಚ ಹಾಲಿನ ಕ್ರೀಮ್ ತೆಗೆದುಕೊಳ್ಳಿ. ಇದನ್ನು ಚರ್ಮದ ಮೇಲೆ ಹಚ್ಚಿಕೊಳ್ಳಿ. ರಾತ್ರಿ ಹಾಗೆ ಬಿಟ್ಟು ಬೆಳಿಗ್ಗೆ ತೊಳೆಯಿರಿ.
ಓಟ್ಸ್ ಮತ್ತು ಜೇನುತುಪ್ಪ: ಈ ಫೇಸ್ ಮಾಸ್ಕ್ ಮುಖಕ್ಕೆ ಕಾಂತಿ ನೀಡುವುದು ಮಾತ್ರವಲ್ಲದೆ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವುದು.. ಎರಡು ಚಮಚ ಜೇನುತುಪ್ಪದೊಂದಿಗೆ ಎರಡು ಚಮಚ ಓಟ್ಸ್ ಸೇರಿಸಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿ. ರಾತ್ರಿಯಿಡಿ ಹಾಗೆ ಬಿಟ್ಟು ಮರುದಿನ ಬೆಳಗ್ಗೆ ಮುಖ ತೊಳೆಯಿರಿ.