ಬೆಂಗಳೂರು : ಜೀರಿಗೆ ನೀರು ಹೊಟ್ಟೆ ಉಬ್ಬರ ಮತ್ತು ಎದೆಯುರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದು ನಮಗೆ ತಿಳಿದಿದೆ. ಆದರೆ ಈ ಜೀರಿಗೆ ಗರ್ಭಿಣಿಯರಿಗೆ ಎಷ್ಟು ಮುಖ್ಯ ಎಂಬುದು ಇಲ್ಲಿದೆ ನೋಡಿ.
*ಜೀರಿಗೆ ನೀರು ಗರ್ಭಿಣಿಯರಲ್ಲಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದು ಕಾರಬೋಹೈಡ್ರೇಟ್ಸ್ ಮತ್ತು ಕೊಬ್ಬನ್ನು ಜೀರ್ಣಗೊಳಿಸುವ ಕಿಣ್ವಗಳನ್ನು ಉತ್ತೇಜನಗೊಳಿಸುತ್ತದೆ.
* ಜೀರಿಗೆ ನೀರು ಹಾಲುಣಿಸುವ ತಾಯಂದಿರಲ್ಲಿ ಸ್ತನಗಳ ಗ್ರಂಥಿಯಿಂದ ಹಾಲು ಸ್ರವಿಕೆಯಾಗುವುದನ್ನು ಉದ್ದೀಪನಗೊಳಿಸುತ್ತದೆ. ಇದರಿಂದ ತಾಯಂದಿರಲ್ಲಿ ಎದೆಹಾಲು ಹೆಚ್ಚಾಗುತ್ತದೆ.
* ಜೀರಿಗೆ ಅತೀ ಹೆಚ್ಚಿನ ಮಟ್ಟದಲ್ಲಿ ಕಬ್ಬಿಣಾಂಶ ಮತ್ತು ನಾರಿನಂಶವನ್ನು ಹೊಂದಿದೆ. ನಿಮ್ಮ ಇಮ್ಮ್ಯುನಿಟ್ ಸಿಸ್ಟೆಮ್ ಸರಿಯಾದ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕಾದರೆ ಜೀರಿಗೆ ನೀರನ್ನು ಕುಡಿಯುವುದು ಅತೀ ಅಗತ್ಯ.ಇದು ರೋಗಾಣುಗಳ ವಿರುದ್ಧ ಹೋರಾಡಿ ಅನಾರೋಗ್ಯವನ್ನು ತಪ್ಪಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ