ಬೆಂಗಳೂರು : ಬದಲಾಗುತ್ತಿರುವ ಆಹಾರದ ಅಭ್ಯಾಸ, ಜಂಕ್, ಫಾಸ್ಟ್ ಫುಡ್ ಸಂಸ್ಕೃತಿಯಲ್ಲಿ ಹೆಚ್ಚಿನ ಮಂದಿಯನ್ನು ಈಗ ತೂಕದ ಸಮಸ್ಯೆ ಕಾಡುತ್ತಿದೆ. ಹೊಟ್ಟೆ ಬೆಳೆದು ನಾನಾ ತೊಂದರೆಗಳನ್ನು ಅನುಭವಿಸುವಂತಾಗಿದೆ. ಅನಾರೋಗ್ಯ ಸಮಸ್ಯೆಗಳು ಅಧಿಕವಾಗುತ್ತಿವೆ. ಈ ಸಮಸ್ಯೆಗಳಿಂದ ತಪ್ಪಿಸಿಕೊಂಡು ಆರೋಗ್ಯವಾಗಿ ಇರಬೇಕೆಂದರೆ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ ಮಾರ್ಗ. ಆರೋಗ್ಯವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳುವ ವಿಧಾನವೊಂದಿದೆ.
ಅದೇನೆಂದರೆ ಪ್ರತಿ ನಿತ್ಯ ಬೆಳಗ್ಗೆ ಸ್ನಾನ ಮಾಡುವ ಮೊದಲು ಎಳ್ಳೆಣ್ಣೆಯಿಂದ ಹೊಟ್ಟೆ ಮೇಲೆ 15 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಇದರಿಂದ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ. ಕೊಬ್ಬು ಕರಗಲು ಪ್ರಾರಂಭವಾಗುತ್ತದೆ. ಇದರಿಂದ ತೂಕವು ಇಳಿಯುತ್ತದೆ. ಇದು ಹಿಂದಿನ ಕಾಲದಿಂದಲೂ ಮಾಡಿಕೊಂಡು ಬಂದಂತ್ತಾ ವಿಧಾನ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ