Publish Date: Sun, 05 Apr 2020 (07:24 IST)
Updated Date: Sun, 05 Apr 2020 (07:26 IST)
ಬೆಂಗಳೂರು :ಕೆಲವರಿಗೆ ಕೂದಲು ಕಪ್ಪಾಗಿ ದಪ್ಪವಾಗಿ ಬೆಳೆಯಬೇಕು. ಅಂತವರು ತಲೆಸ್ನಾನ ಮಾಡಿದ ಮೇಲೆ ಇದನ್ನು ಹಚ್ಚಿ.
ಕರಿಬೇವಿನ ಸೊಪ್ಪು, ಕಹಿಬೇವಿನ ಸೊಪ್ಪು ಭೃಂಗಾರಾಜ ಮೂರು ಸೊಪ್ಪನ್ನು ತೆಗೆದುಕೊಂಡು ½ ಗ್ಲಾಸ್ ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಬೇಕು. ಅದಕ್ಕೆ ಅಲೋವೆರಾ ಜೆಲ್ ಮತ್ತು 1 ಟೇಬಲ್ ಚಮಚ ಯಾವುದಾದರೂ ಆಯಿಲ್ ನ್ನು ಹಾಕಿ ಮತ್ತೆ ಮಿಕ್ಸಿಯಲ್ಲಿ ರುಬ್ಬಿ ಬಳಿಕ ಅದನ್ನು ಸೋಸಿದಾಗ ಅದರ ಜ್ಯೂಸ್ ಸಿಗುತ್ತದೆ. ಅದನ್ನು ಸ್ಪ್ರೇ ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಡಿ.
ತಲೆ ಸ್ನಾನ ಮಾಡಿದಾಗ ಕೂದಲು ಒಣಗಿದ ನಂತರ ಇದನ್ನು ಕೂದಲಿಗೆ ಸ್ಪ್ರೇ ಮಾಡಿ. ಇದರಿಂದ ಕೂದಲು ಕಪ್ಪಾಗಿ ದಪ್ಪವಾಗಿ ಬೆಳೆಯುತ್ತದೆ.