ಬೆಂಗಳೂರು : ಮೆಂತ್ಯ ಆರೋಗ್ಯಕ್ಕೆ ಉತ್ತಮ. ಆದಕಾರಣ ಮೆಂತ್ಯ ಹಿಟ್ಟಿನ ಗೊಜ್ಜನ್ನು ತಯಾರಿಸಿ ಊಟದ ಜೊತೆ ಸೇರಿಸಿದರೆ ಹಿತವಾಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು : 3 ಚಮಚ ಮೆಂತ್ಯ ಹಿಟ್ಟು, ನೀರು, ½ ಚಮಚ ಅರಿಶಿನ ಪುಡಿ, ಹುಣಸೆಹಣ್ಣು, 2 ಚಮಚ ಬೆಲ್ಲ, ಉಪ್ಪು, 1 ಚಮಚ ಕೊತ್ತಂಬರಿ ಸೊಪ್ಪು, 3 ಚಮಚ ಎಣ್ಣೆ, ಸಾಸಿವೆ, ½ ಚಮಚ ಜೀರಿಗೆ, 2 ಕೆಂಪು ಮೆಣಸಿನ ಕಾಯಿ, ½ ಕಪ್ ಕತ್ತರಿಸಿದ ಈರುಳ್ಳಿ, ಕರಿಬೇವು.
ಮಾಡುವ ವಿಧಾನ : ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ, ಕೆಂಪು ಮೆಣಸಿನಕಾಯಿ ಒಗ್ಗರಿಸಿ ಅದಕ್ಕೆ ಈರುಳ್ಳಿ, ಉಪ್ಪು, ಅರಶಿನ ಪುಡಿ, ಕರಿಬೇವು, ನೀರು ಸೇರಿಸಿ ಕುದಿಸಿ. ಇನ್ನೊಂದು ಪಾತ್ರೆಯಲ್ಲಿ ಮೆಂತ್ಯ ಹಿಟ್ಟಿಗೆ ಸ್ವಲ್ಪ ನೀರನ್ನು ಹಾಕಿ ಉಂಡೆಯಾಗದಂತೆ ಮಿಕ್ಸ್ ಮಾಡಿ ಕುದಿಯುತ್ತಿರುವ ನೀರಿಗೆ ಹಾಕಿ ಮಿಕ್ಸ್ ಮಾಡಿ, ಬೆಲ್ಲ , ಉಪ್ಪು ಸೇರಿಸಿ ಕುದಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ ಮೆಂತ್ಯ ಹಿಟ್ಟಿನ ಗೊಜ್ಜು ರೆಡಿ.