ಬೆಂಗಳೂರು : ರಕ್ತದೊತ್ತಡ ಹೆಚ್ಚಾಗಿ ಮೈಗ್ರೇನ್ ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನ ಶೈಲಿಯಿಂದ ಹೆಚ್ಚಿನವರು ಮೈಗ್ರೀನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ನಿದ್ರಾಹೀನತೆ, ಹಸಿವು ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದಿರುವುದು ಕೂಡ ಮೈಗ್ರೇನ್ಗೆ ಕಾರಣವಾಗಬಹುದು. ಮೈದಾ ಬಳಸಿ ತಯಾರಿಸುವ ಆಹಾರವನ್ನು ಸೇವಿಸಬೇಡಿ. ಮೈದಾದಲ್ಲಿ ಮೈಗ್ರೇನ್ ಹೆಚ್ಚಿಸುವ ರಾಸಾಯನಿಕ ಪದಾರ್ಥಗಳು ಹೆಚ್ಚಾಗಿರುತ್ತವೆ. ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.
ಮೈಗ್ರೇನ್ ಇದ್ದರೆ ಆಹಾರ ಕ್ರಮದಲ್ಲಿ ತಾಜಾ ಮತ್ತು ಒಣಗಿದ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ. ಸಮೃದ್ದ ಪ್ರೋಟೀನ್ ಹೊಂದಿರುವ ಆಹಾರಗಳಾದ ಹಾಲು, ಮೊಸರು , ಬೆಣ್ಣೆ, ಕಾಳು, ಮಾಂಸ ಮತ್ತು ಮೀನುಗಳನ್ನು ಹೆಚ್ಚಾಗಿ ತಿನ್ನುವುದರಿಂದ ಸಮಸ್ಯೆಯನ್ನು ದೂರ ಮಾಡಬಹುದು. ರೋಟಿ, ಅಕ್ಕಿ ಅಥವಾ ಆಲೂಗೆಡ್ಡೆ ಮುಂತಾದ ಪಿಷ್ಟ ಆಹಾರಗಳೊಂದಿಗೆ ಸಲಾಡ್ ಅನ್ನು ಸೇವಿಸುವುದರಿಂದ ಕೂಡ ಮೈಗ್ರೇನ್ ಸಮಸ್ಯೆಯಿಂದ ಪಾರಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.