ಬೆಂಗಳೂರು : ಸಾಮಾನ್ಯವಾಗಿ ಮಕ್ಕಳು ಎಲ್ಲಾ ತರಹದ ಆಹಾರವನ್ನು ತಿನ್ನುವುದರಿಂದ ಅವರಿಗೆ ಹೆಚ್ಚಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಇದರಿಂದ ಅವರಿಗೆ ಹೊಟ್ಟೆನೋವಾಗುತ್ತದೆ. ಇದಕ್ಕೆ ಔಷಧಗಳನ್ನು ನೀಡುವ ಬದಲು ಮನೆ ಮದ್ದಿನಿಂದ ನಿವಾರಿಸಬಹುದು.
ಕಪ್ಪು ಉಪ್ಪು 10ಗ್ರಾಂ, ಹಳೆ ಹುಣಸೆಹಣ್ಣು 20 ಗ್ರಾಂ, ಜೀರಿಗೆ ಪುಡಿ 40 ಗ್ರಾಂ, ಕಾಳುಮೆಣಸಿನ ಪುಡಿ 80ಗ್ರಾಂ ಇವಿಷ್ಟನ್ನು ಚೆನ್ನಾಗಿ ಜಜ್ಜಿ ಗಟ್ಟಿ ಪೇಸ್ಟ್ ಮಾಡಿ ಬಟಾಣಿ ಗಾತ್ರದ ಉಂಡೆ ಮಾಡಿಕೊಳ್ಳಿ. ಅದನ್ನು ಬಿಸಿಲಿನಲ್ಲಿ 2-3 ದಿನ ಒಣಗಿಸಿ. ನಂತರ ಗಾಜಿನ ಸೀಸದಲ್ಲಿ ಸ್ಟೋರ್ ಮಾಡಿ ಇಡಿ. ಇದು 6 ತಿಂಗಳ ತನಕ ಹಾಗೇ ಇಡಬಹುದು.
ಇದನ್ನು ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಊಟ ಆದ ಮೇಲೆ ಕೊಡಿ. ಇದರಿಂದ ಜೀರ್ಣಶಕ್ತಿ ಚೆನ್ನಾಗಿ ಆಗುತ್ತದೆ. ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಕಾಣಿಸಿಕೊಳ್ಳುವುದಿಲ್ಲ. ಇದನ್ನು 3ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳಿಗೂ ಕೊಡಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.