Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿಮ್ಮ ಈ ಹವ್ಯಾಸ ಕಿಡ್ನಿಯನ್ನು ಡ್ಯಾಮೇಜ್ ಮಾಡಬಹುದು ಎಚ್ಚರ

ನಿಮ್ಮ ಈ ಹವ್ಯಾಸ ಕಿಡ್ನಿಯನ್ನು ಡ್ಯಾಮೇಜ್ ಮಾಡಬಹುದು ಎಚ್ಚರ
ಬೆಂಗಳೂರು , ಗುರುವಾರ, 25 ಜುಲೈ 2019 (07:51 IST)
ಬೆಂಗಳೂರು : ದೇಹದ ಬಹುಮುಖ್ಯವಾದ ಅಂಗಗಳಲ್ಲಿ ಕಿಡ್ನಿಯು ಒಂದು. ಕಿಡ್ನಿ ಹಾಳಾದರೆ ಸಾವುಸಂಭವಿಸುತ್ತದೆ. ಆದ್ದರಿಂದ ಕಿಡ್ನಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಹಾಗೇ ನಿಮ್ಮ ಈ ಹವ್ಯಾಸಗಳು ಕಿಡ್ನಿಯನ್ನು ಡ್ಯಾಮೇಜ್ ಮಾಡಬಹುದು ಎಚ್ಚರ.




*ತುಂಬಾ ಪ್ರೋಟಿನ್ ಯುಕ್ತ ಆಹಾರ ಸೇವಿಸುವುದು ಕಿಡ್ನಿಗೆ ಅಪಾಯಕಾರಿ. ಅದರಲ್ಲೂ ಕೆಂಪು ಮಾಂಸ ಸೇವನೆಯಿಂದ ಕಿಡ್ನಿ ಹಾಳಾಗುತ್ತದೆ.


*ವಿಟಮಿನ್  ಡಿ6 ಹಾಗೂ ವಿಟಮಿನ್ ಡಿ ಕೊರತೆ ಕಿಡ್ನಿಗೆ ಅಪಾಯಕಾರಿ ಮತ್ತು ಕಿಡ್ನಿಯಲ್ಲಿ ಕಲ್ಲು ಉತ್ಪತ್ತಿ ಮಾಡುತ್ತದೆ.


* ದೇಹಕ್ಕೆ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯದೇ ಇರುವುದು ಕಿಡ್ನಿ ಸಮಸ್ಯೆಗೆ ಕಾರಣವಾಗುತ್ತದೆ.

*ಮೂತ್ರ ವಿಸರ್ಜನೆ ಮಾಡದೆ ತಡೆದುಕೊಳ್ಳುವುದು ಕಿಡ್ನಿಗೆ ಅಪಾಯವನ್ನುಂಟು ಮಾಡುತ್ತದೆ.

*ಹೆಚ್ಚು ಉಪ್ಪು ತಿನ್ನುವುದು ಕೂಡ ಕಿಡ್ನಿಗೆ ಅಪಾಯಕಾರಿ.

*ಪ್ರತಿಯೊಂದು ಸಮಸ್ಯೆಗೂ ಮಾತ್ರೆಗಳನ್ನು ಸೇವಿಸುವುದರಿಂದ ಕಿಡ್ನಿ ಸಮಸ್ಯೆ ಉಂಟಾಗುತ್ತದೆ.

*ಸಕ್ಕರೆ ಅಂಶವನ್ನು ಹೆಚ್ಚಾಗಿ ತಿನ್ನುವುದರಿಂದ ಡಯಾಬಿಟಿಸ್ ಬರುತ್ತದೆ. ಇದು ಕೂಡ ಕಿಡ್ನಿಗೆ ಅಪಾಯಕಾರಿ.

*ರಕ್ತದೊತ್ತಡ ಕಿಡ್ನಿಗೆ ಹಾನಿಯುಂಟುಮಾಡುವುದರಿಂದ ಆಗಾಗ ರಕ್ತದೊತ್ತಡವನ್ನು ಪರೀಕ್ಷಿಸುತ್ತೀರಿ.

*ಹೆಚ್ಚಿನ ಪ್ರಮಾಣದ ಆಲ್ಕೋಹಾಲ್ ಸೇವನೆ ಕಿಡ್ನಿಗೆ ಅಪಾಯಕಾರಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಬೆಲ್ಲದಿಂದ ಮುಖದ ಅಂದ ಹೆಚ್ಚಿಸಿಕೊಳ್ಳುವುದು ಹೇಗೆ ಗೊತ್ತಾ?