ಬೆಂಗಳೂರು : ಕನ್ನಡಕ ಅತಿಯಾಗಿ ಬಳಸುವುದರಿಂದ ಮೂಗಿನ ಮೇಲೆ ಕಲೆಯಾಗುತ್ತದೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಆದ್ದರಿಂದ ಅದಕ್ಕಾಗಿ ಚಿಂತಿಸುವ ಬದಲು ಇವುಗಳನ್ನು ಬಳಸಿ ಆ ಕಲೆಯನ್ನು ಹೋಗಲಾಡಿಸಿ.
*ಕಿತ್ತಳೆ ಸಿಪ್ಪೆಯನ್ನು ಸೂರ್ಯನ ಬೆಳಕಿನಲ್ಲಿ ಒಣಗಿಸಿ ಅದನ್ನು ಪುಡಿ ಮಾಡಿ. ಒಂದು ಚಮಚ ಕಿತ್ತಳೆ ಸಿಪ್ಪೆ ಪುಡಿಗೆ ಅರ್ಧ ಚಮಚ ಹಾಲನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮೂಗಿನ ಕಲೆ ಮೇಲೆ ಹಚ್ಚಿ. ಒಣಗಿದ ನಂತರ ತಣ್ನೀರಿನಲ್ಲಿ ಮೂಗನ್ನು ತೊಳೆಯಿರಿ. ಹೀಗೆ ನಾಲ್ಕೈದು ದಿನ ಮಾಡಿದರೆ ಕಲೆ ಮಾಯವಾಗುತ್ತದೆ.
* ಒಂದು ಚಮಚ ನಿಂಬೆ ರಸವನ್ನು ಒಂದು ಚಮಚ ನೀರಿಗೆ ಬೆರೆಸಿ ಹತ್ತಿ ಸಹಾಯದಿಂದ ಮೂಗಿನ ಕಲೆ ಮೇಲೆ ಹಚ್ಚಿ. 15 ನಿಮಿಷ ಬಿಟ್ಟು ತಣ್ನೀರಿನಲ್ಲಿ ಮೂಗನ್ನು ತೊಳೆಯಿರಿ. ಒಂದು ವಾರ ಇದನ್ನು ಹಚ್ಚಿದ್ರೆ ಕಲೆ ಮಾಯ.
* ಸೌತೆ ಕಾಯಿಯನ್ನು ಕತ್ತರಿಸಿ ಹೋಳುಗಳನ್ನು ಕಲೆಯಾಗಿರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿದ್ರೆ ಕೆಲವೇ ದಿನಗಳಲ್ಲಿ ಕಲೆ ಕಡಿಮೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.