ಬೆಂಗಳೂರು : ಬೇಸಿಗೆಯಲ್ಲಿ, ನಮ್ಮ ದೇಹಕ್ಕೆ ಹೆಚ್ಚು ನೀರಿನ ಅಗತ್ಯವಿದೆ. ಉಷ್ಣಾಂಶ ಹೆಚ್ಚಾದಂತೆ ದೇಹದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಇದನ್ನು ತಡೆಯಲು ಹೆಚ್ಚು ನೀರಿನಂಶ ಇರುವ ತರಕಾರಿ ಮತ್ತು ಹಣ್ಣುಗಳ ಸೇವನೆ ಅಗತ್ಯವಾಗುತ್ತದೆ. ಅವುಗಳಲ್ಲಿ ಸೋರೆಕಾಯಿ ಅತಿಹೆಚ್ಚು ನೀರಿನಂಶ ಹೊಂದಿದ್ದು, ದೇಹವನ್ನು ತಂಪಾಗಿರಿಸುವ ಗುಣಗಳನ್ನು ಹೊಂದಿದೆ. ಸೋರೆಕಾಯಿ ಸೇವನೆ ದೇಹದ ಆರೋಗ್ಯಕ್ಕೆ ಹೇಗೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳೋಣ.
*ಸೋರೆಕಾಯಿ ರಸವನ್ನು ಕುಡಿಯುವುದರಿಂದ ದೇಹವನ್ನು ಯಾವಾಗಲೂ ಉಲ್ಲಾಸಭಾರಿತವಾಗಿರಿಸಿ, ತಾಜಾತನ ಮೂಡಿಸುತ್ತದೆ. ಇದರ ರಸಕ್ಕೆ ಸ್ವಲ್ಪ ಜೀರಿಗೆ ಮತ್ತು ಉಪ್ಪು ಸೇರಿಸಿ ಪ್ರತಿದಿನ ಬೆಳಿಗ್ಗೆ ಸೇವಿಸಿದರೆ ಬಹಳ ಒಳ್ಳೆಯದು.
*ಪ್ರತಿದಿನ ಬೆಳಿಗ್ಗೆ ಒಂದು ಲೋಟ ಸೋರೆಕಾಯಿ ರಸ ಅಥವಾ ಜ್ಯೂಸ್ ಕುಡಿಯುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗಿ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
*ಸೋರೆಕಾಯಿಯನ್ನು ಮಜ್ಜಿಗೆ ಅಥವಾ ಮೊಸರಿನೊಂದಿಗೆ ಬೆರೆಸಿ ಸೇವಿಸುವುದರಿಂದ ಅತಿಸಾರ ಕಡಿಮೆಯಾಗುತ್ತದೆ.
*ಸೋರೆಕಾಯಿ ರಸವನ್ನು ನಿತ್ಯ ಕುಡಿಯುವುದರಿಂದ ಹೆಚ್ಚು ಹಸಿವಾಗುವುದಿಲ್ಲ.ಆದ್ದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸೋರೆಕಾಯಿ ಸಹಕಾರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ