ಬೆಂಗಳೂರು : ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯರಲ್ಲಿ ಅನೇಕ ಸಮಸ್ಯೆಗಳು ಕಾಡುತ್ತದೆ. ಅದರಲ್ಲಿ ಚರ್ಮದ ಸಮಸ್ಯೆಗಳು ಕೂಡ ಒಂದು. ಹೌದು, ಮಹಿಳೆಯರು ಗರ್ಭಾಧಾರಣೆಯ ವೇಳೆ ಕೆಲವೊಂದು ಚರ್ಮದ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವು ಯಾವುವು ಎಂಬುದನ್ನು ತಿಳಿಯೋಣ.
*ಗರ್ಭಧಾರಣೆಯ ವೇಳೆ ಮಹಿಳೆಯರಲ್ಲಿ ಹಾರ್ಮೋನ್ ನಿಮದಾಗಿ ಮುಖದಲ್ಲಿ ಹೆಚ್ಚಾಗಿ ಮೊಡವೆಗಳು ಮೂಡುತ್ತವೆ.
*ಗರ್ಭಧಾರಣೆಯ ಸಮಯದಲ್ಲಿ ಈಸ್ಟ್ರೋಜನ್ ಹಾರ್ಮೋನ್ ಮಟ್ಟ ಏರಿಕೆಯಾಗುವುದರಿಂದ ಹೊಟ್ಟೆ, ಕಾಲುಗಳು, ಸ್ತನಗಳು ಸುತ್ತ ತುರಿಕೆ ಕಾಣಿಸಿಕೊಳ್ಳುವುದು.
* ಗರ್ಭಧಾರಣೆಯ ಸಮಯದಲ್ಲಿ ಈಸ್ಟ್ರೋಜನ್ ಹಾರ್ಮೋನ್ ಏರಿಕೆಯಿಂದ ಮೈಯಲ್ಲಿ ಮಚ್ಚೆಗಳು ಮೂಡುತ್ತವೆ.
* ಗರ್ಭಧಾರಣೆಯ ವೇಳೆ ಸ್ತನಗಳು, ಸೊಂಟ, ತೊಡೆಯ ಭಾಗದಲ್ಲಿ ಸ್ಟ್ರೆಚ್ ಮಾರ್ಕ್ಸ್ ಗಳು ಮೂಡುತ್ತವೆ.