Select Your Language

Notifications

webdunia
webdunia
webdunia
webdunia

ಮಕ್ಕಳು ಸೇವಿಸುವ ಈ ಆಹಾರಗಳು ಅವರ ಸ್ಮರಣ ಶಕ್ತಿ ದುರ್ಬಲಗೊಳಿಸಬಹುದು

Children brain
ಮಕ್ಕಳು ಆರೋಗ್ಯಕರ ಆಹಾರ ಸೇವಿಸುವುದು ತುಂಬಾ ಮುಖ್ಯ. ಮಕ್ಕಳು ಸೇವಿಸುವ ಈ ಕೆಲವೊಂದು ಆಹಾರಗಳು ಅವರ ಸ್ಮರಣ ಶಕ್ತಿಯನ್ನೇ ದುರ್ಬಲಗೊಳಿಸಬಹುದು. ಆ ಆಹಾರಗಳು ಯಾವುದು ಇಲ್ಲಿದೆ ನೋಡಿ ವಿವರ.
 

ಮಕ್ಕಳ ಬೆಳವಣಿಗೆಗೆ ಎಲ್ಲಾ ರೀತಿಯ ಪೋಷಕಾಂಶಗಳನ್ನು ಒಳಗೊಂಡ ಆಹಾರ ತುಂಬಾ ಮುಖ್ಯ. ದೇಹ ಮಾತ್ರವಲ್ಲ ಅವರ ಮೆದುಳಿನ ಬೆಳವಣಿಗೆಯೂ ಚೆನ್ನಾಗಿ ಆಗುವಂತಹ ಆಹಾರ ಸೇವಿಸಬೇಕು. ಇಲ್ಲದೇ ಹೋದರೆ ಓದಿನಲ್ಲಿ ಹಿಂದೆ ಬೀಳುವುದು, ಚುರುಕು ಕಡಿಮೆಯಾಗುವುದು ಮತ್ತು ಮಂಕಾಗಿ ಹೋಗುತ್ತಾರೆ. ಇತರೆ ಮಕ್ಕಳ ಮುಂದೆ ನಿಮ್ಮ ಮಕ್ಕಳು ಡಲ್ ಎನಿಸಬಹುದು.

ಮಕ್ಕಳ ಮೆಮೊರಿ ಪವರ್ ಚೆನ್ನಾಗಿರಬೇಕು ಎಂದರೆ ಈ ಕೆಲವು ಆಹಾರಗಳನ್ನು ಕೊಡಬೇಡಿ.

ಸಕ್ಕರೆ ಅಂಶದ ಪಾನೀಯಗಳು: ಅತಿಯಾದ ಸಕ್ಕರೆ ಅಂಶದ, ಸಂಸ್ಕೃರಿತ ಪಾನೀಯಗಳು ಸ್ಮರಣ ಶಕ್ತಿ ಮತ್ತು ಏಕಾಗ್ರತೆ ಕುಂಠಿತಗೊಳಿಸಬಹುದು.
ಸಂಸ್ಕರಿತ ಕಾರ್ಬೋಹೈಡ್ರೇಟ್ ಗಳು: ಬಿಳಿ ಬ್ರೆಡ್, ವೈಟ್ ರೈಸ್ ಸೇರಿದಂತೆ ಫೈಬರ್ ಅಂಶ ಕಡಿಮೆಯಿರುವ ಆಹಾರಗಳಿಂದ ಮೆದುಳಿನ ಕಾರ್ಯನಿರ್ವಹಣೆ ಕುಂಠಿತವಾಗಬಹುದು.

ಫಾಸ್ಟ್ ಫುಡ್: ಕರಿದ ತಿಂಡಿಗಳು, ಫಾಸ್ಟ್ ಫುಡ್ ಗಳನ್ನು ಅತಿಯಾಗಿ ಸೇವಿಸುವುದರಿಂದ ಮಾನಸಿಕ ಶಕ್ತಿ ಕುಂಠಿತಗೊಳಿಸಬಹುದು.
ಮರ್ಕ್ಯುರಿ ಫಿಶ್: ಅತಿಯಾದ ಮರ್ಕ್ಯುರಿ ಅಂಶವಿರುವ ಶಾರ್ಕ್, ಸ್ವಾರ್ಡ್ ಫಿಶ್ ನಂತಹ ಮೀನಿನ ಸೇವನೆ ಬೆಳೆಯುತ್ತಿರುವ ಮಗುವಿನ ಮೆದುಳಿಗೆ ಅಡ್ಡಪರಿಣಾಮ ಉಂಟು ಮಾಡಬಹುದು.

ಇಂತಹ ಆಹಾರಗಳನ್ನು ಸೇವಿಸಲೇಬಾರದು ಎಂದಲ್ಲ. ಅಪರೂಪಕ್ಕೊಮ್ಮೆ ಸೇವಿಸಿದರೆ ಸಮಸ್ಯೆಯಿಲ್ಲ. ಆದರೆ ನಿಯಮಿತವಾಗಿ ಸೇವನೆ ಮಾಡುವುದು ಉತ್ತಮವಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಹೈಡ್ರೇಶನ್ ಅಂದ್ರೆ ಏನ್‌, ಸಮಸ್ಯೆಯಾದಾಗ ಏನ್‌ ಮಾಡಬೇಕು ಗೊತ್ತಾ